ಜಿಲ್ಲೆ

ನ್ಯಾಯಾಕ್ಕಾಗಿ ಹೋರಾಟ ಅಗತ್ಯ

ಮಂಜುನಾಥ

ಹೊಸಪೇಟೆ: ಬಂಡವಾಳಶಾಹಿ ವ್ಯವಸ್ಥೆಯ ಕೊಳೆತ ಸಂಸ್ಕೃತಿಯ ವಿರುದ್ಧ ಹೊರಡಲು ಪ್ರತಿಯೊಬ್ಬರೂ ಭಗತ್ ಸಿಂಗ್ ಆಗಬೇಕಿದೆ ಎಂದು ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಹೇಳಿದರು.

ನಗರದ ಎಐಡಿಎಸ್‌ಒ ಕಚೇರಿಯಲ್ಲಿ ಸೋಮವಾರ ಒಂದು ದಿನದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಂದು ಮಗುವಿಗೂ ವೈಜ್ಞಾನಿಕ, ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಶಿಕ್ಷಣ ಸಿಗುವಂತಾಗಲೆAಬ ಮಹದಾಸೆಯಿಂದ ಈಶ್ವರ್ ಚಂದ್ರ ವಿದ್ಯಾಸಾಗರ, ಜ್ಯೋತೀರಾವ್ ಫುಲೆ, ಸಾವಿತ್ರಿ ಬಾ ಫುಲೆ ರಂತಹ ವ್ಯಕ್ತಿಗಳು ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು ಎಂದರು.

ಭಗತ್ ಸಿಂಗ್, ನೇತಾಜಿ, ಆಜಾದ್ ರಂತಹ ಕ್ರಾಂತಿಕಾರಿಗಳು ಪ್ರಾಣವನ್ನೇ ತೆತ್ತಿದ್ದಾರೆ. ಆದರೆ ಸ್ವಾತಂತ್ರ‍್ಯಾನAತರದ ಎಲ್ಲಾ ಸರ್ಕಾರಗಳು ಶಿಕ್ಷಣವನ್ನು ಒಂದು ಮಾರಾಟ ಮಾಡಬಹುದಾದ ವಸ್ತುವನ್ನಾಗಿಸಿಬಿಟ್ಟಿವೆ. ಕಾರ್ಪೊರೇಟ್ ಮನೆತನಗಳಿಗೆ ಶಿಕ್ಷಣ ಕ್ಷೇತ್ರವನ್ನು ಧಾರೆಯೆರೆದಿದ್ದಾರೆ. ಒಬ್ಬ ಬಡ ಮಧ್ಯಮ ವರ್ಗದ ವಿದ್ಯಾರ್ಥಿ ಶಿಕ್ಷಣ ಪಡೆಯಲೆಂದು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡಿದರೆ. ಆದರೆ, ಬೀಳಬಹುದಾದ ಕಟ್ಟಡ, ಶಿಕ್ಷಕರಿಲ್ಲದ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇನ್ನು ಖಾಸಗಿ ಶಾಲೆಗಳ ಓದಬಹುದೆಂಬ ಯೋಚನೆಯೂ ಅವನ ಕನಸಲ್ಲೂ ಬರಲಾರದು. ಕಂತೆ ಕಂತೆ ದುಡ್ಡಿದ್ದವರಿಗೆ ಮಾತ್ರ ಖಾಸಗಿ ಶಾಲೆ. ಶಿಕ್ಷಣ ಉಳ್ಳವರ ಪಾಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕೋಮು ವೈಶ್ಯಮೆಗಳಿಗೆ ಬಲಿಯಾಗದೆ, ಜಾತಿ-ಧರ್ಮ ಗಂಡು-ಹೆಣ್ಣು ಬೇಧ ಭಾವ ಬಿಟ್ಟು ಕಾಲೇಜು ಮಟ್ಟದಲ್ಲಿ ಸಂಘಟಿತರಾಗಿ ಇಂದಿನ ಸಮಸ್ಯೆಗಳಾದ ಬಡತನ, ಶೋಷಣೆ, ಅತ್ಯಾಚಾರ, ಅಸಮಾನತೆ ಯ ವಿರುದ್ಧ ಹೋರಾಟ ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.

ಪ್ರಮುಖರಾದ ಯೂ.ಉಮಾದೇವಿ, ರವಿಕಿರಣ್, ಕೆ.ಚಂದ್ರ, ಎಸ್.ಆಕಾಶ್, ಜ್ಞಾನೇಶ, ನಾಗರಾಜ್, ಆದಿತ್ಯ, ಗೌತಮ್ ಇತರರಿದ್ದರು.