ಹೊಸಪೇಟೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿದರು. 
ಜಿಲ್ಲೆ

ಮಣ್ಣಿನ ಪರೀಕ್ಷೆಯಿಂದ ರೈತರಿಗೆ ಅನುಕೂಲ

ಮಂಜುನಾಥ

ಹೊಸಪೇಟೆ: ಬೆಳೆಗಳ ಬದಲಾವಣೆ ಸೇರಿದಂತೆ ಮಣ್ಣಿನ ಪರೀಕ್ಷೆ ಮಾಡಿ ನೀಡುವ ವರದಿಯಂತೆ ರೈತರು ಮುಂದುವರೆಯಬೇಕು. ಮುಂದಿನ 6ರಿಂದ 8 ತಿಂಗಳಲ್ಲಿ ಈ ಕೇಂದ್ರದ ಸೇವೆ ಲಭ್ಯವಾಗಲಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಳಿ ಮಣ್ಣು ಆರೋಗ್ಯ ಕೇಂದ್ರದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿಜಯನಗರದಲ್ಲಿ ಮಣ್ಣು ಆರೋಗ್ಯ ಕೇಂದ್ರದಿAದ ರೈತರಿಗೆ ಅನುಕೂಲವಾಗಲಿದೆ. ಮಣ್ಣಿಗೂ ವಿಶೇಷ ಗುಣವಿರುತ್ತದೆ. ಮಣ್ಣಿನ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಇದರಿಂದ ಯಾವ ಬೆಳೆ ಬೆಳೆಯಬೇಕು ಎಂಬುದು ಗೊತ್ತಾಗುತ್ತದೆ. ಹೊಸಪೇಟೆಯಲ್ಲಿ ಅಂದಾಜು 25 ಎಕರೆ ಭೂಮಿ ಕೃಷಿಗೆ ಮೀಸಲಿಡಬೇಕು. ಇದನ್ನು ಮುಂದೆ ಕೃಷಿ ಕಾಲೇಜು, ವಿಶ್ವವಿದ್ಯಾಲಯ ಮಾಡಬೇಕಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರ ಸಚಿವರ ಜತೆ ಮಾತಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಮಣ್ಣು ಪರೀಕ್ಷೆ ಪ್ರಯೋಗಾಲಯದಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಜಿಲ್ಲೆಯ ಕೊನೆ ಭಾಗದ ರೈತರು ಮಣ್ಣು ಮಾದರಿಗಳನ್ನು ಬಳ್ಳಾರಿ ಕಳಿಸಿಕೊಡಲಾಗುತ್ತಿತ್ತು. ರೈತರು ಬೆಳೆಗೆ ಯಾವ ಪ್ರಮಾಣದಲ್ಲಿ ರಸಗೊಬ್ಬರ ಬಸಬೇಕೆಂದು ಮುಖ್ಯ. ಹೆಚ್ಚಿಗೆ ರಸಗೊಬ್ಬರ ಬಳಸಿ ಹೆಚ್ಚಿಗೆ ಬೆಳೆ ಬೆಳೆಯುವ ಯೋಚನೆಯಲ್ಲಿದ್ದಾರೆ. ಆದರೆ, ಕಡಿಮೆ ಖರ್ಚಿನಲ್ಲಿ ಮಿತವ್ಯಯವಾಗಿ ರಸಗೊಬ್ಬರ ಬಳಸಿದರೆ, ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಬಳಿಕ ಕೊರತೆಗಳನ್ನುö ತಿಳಿದು, ಸಮತೋಲನವಾಗಿ ಪರಿಸರಕ್ಕೆ ಹಾನಿಯಾಗದಂತೆ ರಸಗೊಬ್ಬರ ಬಳಸಬೇಕು. ರೈತರಿಗೆ ಇದಕ್ಕೆ ಮಣ್ಣು ಪರೀಕ್ಷೆ ಅನುಕೂಲವಾಗಲಿದೆ ಎಂದರು.

ಈ ಸಾಲಿನ ಕೃಷಿ ಇಲಾಖೆಯ ಯೋಜನೆ ಅಡಿ ರೈತರಿಗೆ ಪರಿಕರ ಮತ್ತು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು. ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ, ಎಡಿಎ ಹಾರುನ್ ರಷೀದ್, ಕೃಷಿ ಅಧಿಕಾರಿ ವೆಂಕಟೇಶ್ ಇತರರಿದ್ದರು.