ಹೊಸಪೇಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಗರದ ಏಳು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. 5141 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಒಟ್ಟು 4736 ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ ಅಂದಾಜು 16.51 ಕೋಟಿ ರೂ. ಹಣ ಸಂದಾಯವಾಗಿದೆ ಎಂದು ಘೋಷಿಸಲಾಯಿತು.
ನಗರದ ಏಳು ನ್ಯಾಯಾಲಯದಲ್ಲಿ ವಿವಿಧ ವ್ಯಾಜ್ಯಗಳು ಲೋಕ್ ಅದಾಲತನ್ನು ಯಶಸ್ವಿಯಾಗಿ ಇತ್ಯರ್ಥವಾದವು. ಇದರಲ್ಲಿ ಸಿವಿಲ್ ಧಾವೆಗಳು 64, ಚಕ್ ಬೌನ್ಸ್ 187, ಕ್ರಿಮಿನಲ್ ಕಾಂಪೌAಡ್ ಎಬಲ್ ಪ್ರಕರಣಗಳು 16, ಕ್ರಿಮಿನಲ್ ಮಿಸ್ ಪ್ರಕರಣಗಳು 500, ಆಫೀಲ್ ಪ್ರಕರಣಗಳು 9, ಲಘು ಪ್ರಕರಣಗಳು 3855, ಅಪಘತ ಪ್ರಕರಣಗಳು 15, ಕೌಟಂಬಿಕ ಕಲಹಗಳು 03, ವ್ಯಾಜ ಪೂರ್ವ ಪ್ರಕರಣಗಳು 89 ಇವೆಲ್ಲಾ ಪ್ರಕರಣಗಳು ಸೇರಿವೆ.
ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ ನಾಗಲಾಪುರ ಮಾತನಾಡಿದರು. ಜನರಲ್ಲಿ ದ್ವೇಷ ಭಾವನೆ ತೊರೆದು ಸಹಬಾಳ್ವೆಯಿಂದ ಜೀವನ ನಡೆಸಲು ಲೋಕ ಅದಾಲತ್ ಸಹಕಾರಿಯಾಗಿದೆ. ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಜನರಿಗೆ ಮಾನಸಿಕ ನೆಮ್ಮದಿ ದೊರೆಯಲಿದ್ದು, ಇದರಿಂದ ಬಾಂಧವ್ಯ ಬೆಸೆಯುವ ಕೆಲಸವಾಗಲಿದೆ ಎಂದರು.
ಒಂದಾದ ಮೂರು ದಂಪತಿಗಳು:
ಕೆಲ ವರ್ಷಗಳಿಂದ ಪರಸ್ಪರ ಬೇರ್ಪಟ್ಟ ಮೂರು ದಂಪತಿಗಳು ಲೋಕ ಅದಾಲತ್‌ನಲ್ಲಿ ಒಂದಾದ ಘಟನೆ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು.