ಜಿಲ್ಲೆ

ಜೆನ್ನಿ ಮಿಲ್ಕ್ ಆರೋಪಿಗಳ ಜಾಮೀನು ವಜಾ

ಹೊಸಪೇಟೆ: ಜೆನ್ನಿ ಮಿಲ್ಕ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳ ಜಾಮೀನು ಅರ್ಜಿ ಶುಕ್ರವಾರ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಜಿನ್ನಿ ಮಿಲ್ಕ್ ಕಂಪನಿಯಿAದ ರೈತರಿಗೆ ವಂಚನೆ ಆಗುತ್ತಿದೆ ಎಂದು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಸೆ.19ರಂದು ಪ್ರಕರಣ ದಾಖಲಿಸಿತು. 5 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿಗಳು ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅ.26ರಂದು ಅರ್ಜಿ ವಿಚಾರಣೆಯಲ್ಲಿ ಪ್ರಕರಣದ ಸ್ವರೂಪ ಮತ್ತು ತೀವ್ರತೆಯನ್ನು ಗಮನಿಸಿದ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ ಅವರು ಅರ್ಜಿ ತಿರಸ್ಕರಿಸಿದರು.

ತಿರ್ಪೂ ಪ್ರಶ್ನಿಸಿ ನಾಲ್ಕನೇ ಆರೋಪಿ ಹರ್ಷವರ್ಧನ ರಾಜು, 5ನೇ ಆರೋಪಿ ಗುರಂ ಯೋಗಾನಂದ ರೆಡ್ಡಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಾಧೀಶ ಅಬ್ದುಲ್ ರೆಹಮಾನ್ ನಂದಗಡಿ ಅವರು ಅರ್ಜಿ ವಿಚಾರಣೆ ನಡೆಸಿ, ಪ್ರಕರಣವು ತನಿಖಾ ಹಂತದಲ್ಲಿ ಇರವುದರಿಂದ ಆರೋಪಿಗಳು ಜಾಮೀನು ಅರ್ಜಿಗೆ ಅರ್ಹರಲ್ಲವೆಂದು ಪರಿಗಣಿಸಿ ಶುಕ್ರವಾರ ಅರ್ಜಿ ತಿರಸ್ಕರಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಅಂಬಣ್ಣ ವಾದ ಮಂಡಿಸಿ ಯಶಸ್ವಿಯಾಗಿದ್ದಾರೆ.

ಹೆಚ್ಚಿನ ವಿಚಾರಣೆಗೆ ಇಂದು ಆಂದ್ರಕ್ಕೆ

ಜಿನ್ನಿ ಮಿಲ್ಕ್ ವಂಚನೆ ಪ್ರಕರಣದಲ್ಲಿ ಐದು ಜನ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದ ಸಿಐಡಿ ಡಿವೈಎಸ್‌ಪಿ ಅಸ್ಲಾಂ ಪಾಷಾ ನೇತೃತ್ವದ ತಂಡ ಶನಿವಾರ ಕೂಡ ತನಿಖೆ ಮುಂದು ವರೆಸಿದ್ದಾರೆ.

ಮಿಲ್ಕ್ ಕಂಪನಿ ಕಂಪನಿಯ ಎಂ.ಡಿ. ನೆಲ್ಲೂರಿನ ನೂತಲಪಾಟಿ ಮುರುಳಿ, ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ, ಸಯ್ಯದ್ ಮೊಹಮ್ಮದ್ ಗೌಸ್, ಹರ್ಷವರ್ಧನ ರಾಜು, ಜಿ.ಯೋಗಾನಂದ ರೆಡ್ಡಿ ಐವರು ಆರೋಪಿಗಳನ್ನು ಶನಿವಾರ ವಿವಿಧ ಕಡೆ ಪಂಚನಾಮೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಕತ್ತೆ ಹಾಲಿನ ಹೆಸರಲ್ಲಿ ಕೋಟಿ ಕೋಟಿ ವಂಚನೆ ಪ್ರಕರಣದ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಪ್ರಕರಣದಲ್ಲಿ ಭಾರಿ ಟ್ವಿಸ್ಟ್ ಸಿಗುವ ಸಾಧ್ಯತೆ. ವಂಚನೆ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆದೊಯ್ಯಲು ಅಧಿಕಾರಿಗಳು ಸಿದ್ದತೆ ನಡೆಸಿದರು.

ಎರಡು ದಿನಕ್ಕೆ ಮಾತ್ರ ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ಸಿಐಡಿ ತಂಡ ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ಣೂ ಮೂರು ಜನ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನ.17ರಂದು ಆಂದ್ರ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.