ಜಿಲ್ಲೆ

ಆಧಾರ್ ಅಪರೇಟರ್ಗಳಲ್ಲಿ ಸಭ್ಯತೆ ಇರಲಿ

ಮಂಜುನಾಥ

ಹೊಸಪೇಟೆ: ದೇಶದ ನಾಗರಿಕರಿಗೆ ಈಗಿನ ದಿನಗಳಲ್ಲಿ ಆಧಾರ್ ಕಾರ್ಡ್ ಗುರುತಿಸುವಿಕೆಯ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಜಿಲ್ಲಾಡಳಿತ, ಇ-ಆಡಳಿತ ಕೇಂದ್ರ ಹಾಗೂ ಆಧಾರ್ ವಿಶಿಷ್ಟ ಗುರುತಿನ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಧಾರ್ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಧಾರ್ ಕಾರ್ಡ್ ಬಂದ ಮೊದಲ ದಿನಗಳಲ್ಲಿ ಸಾರ್ವಜನಿಕರಲ್ಲಿ ಕೆಲವು ಗೊಂದಲಗಳು ಮತ್ತು ಅನೇಕ ಚರ್ಚೆಗಳಿಗೆ ಗ್ರಾಸವಾಗಿತ್ತು. ಆದರೆ, ಈಗ ಪ್ರತಿಯೊಬ್ಬ ನಾಗರಿಕರಿಗೆ ಆಧಾರ್ ಒಂದು ವಿಶಿಷ್ಟಿ ಗುರುತಿನ ದಾಖಲೆಯಾಗಿ ಬೆಳೆದಿದೆ. ಎಲ್ಲಾದಕ್ಕೂ ಆಧಾರ್ ಜೋಡನೆ ಮಾಡಿರುವುದರಿಂದ ಸಾಕುಷ್ಟು ಅಪರಾಧಗಳು ಬೆಳಕಿಗೆ ಬರುತ್ತಿವೆ. ಜಿಲ್ಲೆಯಲ್ಲಿ ಈಗಲು ಕೆಲವೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಂಡಿಲ್ಲ. ಅವರಿಗೆ ಆಧಾರ್ ಕಾರ್ಡ್ನ ಪ್ರಾಮುಖ್ಯತೆ ತಿಳಿಸಿ, ಶೇ.100 ರಷ್ಟು ಜನ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಹಾಗೆ ಮಾಡಬೇಕಾಗಿದೆ ಎಂದರು.

ಸರ್ಕಾರದ ಕಚೇರಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಬರುವವರ ಹತ್ತಿರ ಸಬ್ಯತೆಯಿಂದ ವರ್ತಿಸಿ. ಪ್ರತಿ ಸಣ್ಣ ದಾಖಲೆಗಳಿಗೆ ಅವರನ್ನು ವಾರಗಟ್ಟಲೆ ಅಲೆದಾಡದಂತೆ ಮಾಡಬಾರದು. ನಮ್ಮಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಆಧಾರ್ ನೋಂದಣಿ ಅಪರೇಟರ್‌ಗಳಿಗೆ ಸೂಚಿಸಿದರು.

ಜಿ.ಪಂ. ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ, ಅಂಚೆ ಕಚೇರಿಯ ಹಿರಿಯ ಅಧೀಕ್ಷ ಪಿ.ಚಿದಾನಂದ, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಮೇಘಾ ಇತರರಿದ್ದರು.