ಜಿಲ್ಲೆ

ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ರದ್ದಪಡಿಸಿ

ಮಂಜುನಾಥ

ಹೊಸಪೇಟೆ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ನಗರದ ಜೆಸ್ಕಾಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆ ಜಾರಿ ಮಾಡಬಾರದು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮೃತರಾದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 8 ಗಂಟೆ ನಿರಂತರ ವಿದ್ಯುತ್ ಸಂಪರ್ಕ ನೀಡಬೇಕು. ನಗರ, ಗ್ರಾಮೀಣಗಳಿಗೆ ಸಮನಾಂತರವಾಗಿ ಗೃಹ ಬಳಕೆ ವಿದ್ಯುತ್ ನೀಡಬೇಕು. ಅಂದಾಜು 60 ವರ್ಷಗಳಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ ಹಾಕಿರುವ ವಿದ್ಯುತ್ ತಂತಿಯನ್ನು ಬದಲಿಸಿ ಗುಣಮಟ್ಟದ ತಂತಿಗಳನ್ನು ಹಾಕಬೇಕು. ಬೈಲುವದ್ದಿಗೇರಿ ಗ್ರಾಮದ ಹತ್ತಿರ 110 ಕೆ.ವಿ. ಸಬ್‌ಸ್ಟೇಷನ್ ಕೇಂದ್ರವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಆದಷ್ಟು ಬೇಗ ಪೂರ್ಣ ಮಾಡಬೇಕು. ಸುಟ್ಟುಹೋದ ಟ್ರಾನ್ಸ್ಫಾರ್ಮ 24 ಗಂಟೆಯಲ್ಲಿ ಸರಿಪಡಿಸಬೇಕು. ಅಕ್ರಮಸಕ್ರಮ ಯೋಜನೆ ಅಡಿಯಲ್ಲಿ ಆರ್.ಆರ್.ನಂಬರ್ ಮತ್ತು ಟಿ.ಸಿ. ಮತ್ತು ಕಂಬಗಳು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಆದರೆ ರೈತರ ಬಳಿ ಹಣವನ್ನು ವಸೂಲಿ ಮಾಡುವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸಣ್ಣಕ್ಕಿ ರುದ್ರಪ್ಪ, ಜಯರುದ್ದೀನ್, ಜಾಕೀರ್, ಮೂರ್ತಿ, ಎಚ್.ಸತೀಶ್, ಎ.ರಾಮಾಂಜಿನಿ, ವಿ.ಗಾಳೆಪ್ಪ, ಸುರೇಶ್, ಕೆ.ರಾಮಾಂಜಿನಿ, ಎಲ್.ನಾಗೇಶ್, ದುರುಗಪ್ಪ ಇತರರಿದ್ದರು.