ಹೊಸಪೇಟೆ: ಕರ್ಕಶ ಶಬ್ಧದಿಂದ ಜನರಿಗೆ ಕಿರಿಕಿರಿ ಉಂಟು ಮಾಡುವ ಬೈಕ್ ಸವಾರರ ಹೆಡೆಮುರಿಕಟ್ಟಲು ಪೊಲೀಸ್ ಇಲಾಖೆ ಮುಂದಾಗಿದೆ. ಸ್ವಾತಂತ್ರ್ಯೋತ್ಸವದ ದಿನ ಬೈಕ್ ಡಿಫೆಕ್ಟಿವ್ ಸೈಲೆನ್ಸರ್‌ಗಳ ಪತ್ತೆ ಕಾರ್ಯ ಆರಂಭಿಸಿದ್ದು, ಆ.15ರಂದು ಒಂದೇ ದಿನ 65 ದ್ವಿಚಕ್ರ ವಾಹನಗಳ ಜಪ್ತಿಮಾಡಲಾಗಿದೆ.
ಬುಲೆಟ್ ಸೇರಿದಂತೆ ವಿವಿಧ ಕಂಪನಿಯ ಬೈಕ್‌ಗಳಿಗೆ ‘ಡಿಫೆಕ್ಟಿವ್ ಸೈಲೆನ್ಸರ್’ ಅಳವಿಡಿಸಿಕೊಂಡು ಶಾಲಾ- ಕಾಲೇಜು ಸುತ್ತ, ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಮಂಗಳವಾರ ಹೊಸಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ಬೈಕ್ ಹಾಗೂ ಕೂಡ್ಲಿಗಿ, ಹಬೊಹಳ್ಳಿಯಲ್ಲಿ ತಲಾ 7 ಹಾಗೂ ಹೊಸಪೇಟೆ ಪಟ್ಟಣ ಠಾಣಾ ಪೊಲೀಸರು ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ಹೊಸಪೇಟೆಯಲ್ಲೇ ಹೆಚ್ಚು: ಕರ್ಕಶ ಸದ್ದು ಮಾಡುವ ಸೈಲೆನ್ಸರ್‌ಗಳನ್ನು ಹೊಂದಿರುವ ಬೈಕ್‌ಗಳು ಜಿಲ್ಲಾದ್ಯಂತ ಇವೆ. ಅದರಲ್ಲೂ ಹೊಸಪೇಟೆಯಲ್ಲಿ ತುಸು ಹೆಚ್ಚಿದೆ. ಕೆಲ ಯುವಕರು ಬೈಕ್‌ಗಳ ಸೈಲೆನ್ಸರ್ ಫಿಲ್ಟರ್‌ಗಳನ್ನು ಕೀಳಿಸಿದರೆ, ಇನ್ನೂ ಕೆಲ ಯುವಕರು ಬೈಕ್‌ನ ಶಬ್ಧ ಹೆಚ್ಚಿಸಲು ವಿವಿಧ ಬಿಡಿ ಭಾಗಗಳನ್ನು ಜೋಡಿಸುತ್ತಾರೆ. ಬೇಡ ಎಂದರೂ ಕೇಳಲ್ಲ ಎಂಬುದು ಅನೇಕ ಮೆಕಾನಿಕ್‌ಗಳ ಅಸಹಾಯಕ ನುಡಿ.
ಇದನ್ನೂ ಓದಿ: 8-Year-Old Boy Becomes Honorary Police Officer In Shimoga | ಒಂದು ಗಂಟೆಯ ಅವಧಿಗೆ ಪೊಲೀಸ್ ಅಧಿಕಾರಿಯಾದ 8ರ ಪೋರ!
ವ್ಹೀಲಿಂಗ್, ರೇಸ್ ತಡೆಗೆ ಕ್ರಮವಹಿಸಿ: ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ ಹಿಂಭಾಗದಲ್ಲಿ ಕೆಲ ತಿಂಗಳ ಹಿಂದೆ ಬುಲೆಟ್ ಬೈಕ್ ವ್ಹೀಲಿಂಗ್ ಮಾಡುವಾಗ ಭೀಕರ ಅಪಘಾತ ಸಂಭವಿಸಿದ ದೃಶ್ಯಗಳು ಜಾಲತಾಣದಲ್ಲಿ ಹರಿದಾಡಿದರೂ, ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಸಿದ್ಧಿಪ್ರಿಯ ಕಲ್ಯಾಣ ಮಂಟಪ- ಕನಕದಾಸ ವೃತ್ತ ಮಾರ್ಗವಾಗಿ ರೈಲ್ವೆ ಗೇಟ್‌ವರೆಗೆ ಹಾಗೂ ಹೊಸಪೇಟೆ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ರಸ್ತೆ, ಕಾಲೇಜ್ ರೋಡ್, ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದ ಸುತ್ತ, ಐಬಿ ರೋಡ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ನಡೆಸುತ್ತಾರೆ.
ವಿವಿಧೆಡೆ ಭಾನುವಾರ ಮತ್ತು ರಜಾ ದಿನಗಳಲ್ಲಿ ವ್ಹೀಲಿಂಗ್ ನಡೆಯುತ್ತದೆ. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಬೈಕ್ ರೇಸ್ ನಡೆಸುತ್ತಾರೆ. ಬಹುತೇಕ ನಂಬರ್ ಪ್ಲೇಟ್, ಡ್ರೈವಿಂಗ್ ಲೈಸೆನ್ಸ್ ಇರುವುದೂ ಅನುಮಾನ. ಈ ಬಗ್ಗೆ ಪ್ರಶ್ನಿಸಿದರೆ, ಜಗಳಕ್ಕೆ ಬರುತ್ತಾರೆ ಎಂದು ದೂರುವ ಜನರು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
16 ಎಚ್‌ಪಿಟಿ 2 -
ಹೊಸಪೇಟೆಯ ವಿವಿಧೆಡೆ ಸಂಚರಿಸುತ್ತಿದ್ದ ಡಿಫೆಕ್ಟಿವ್ ಸೈಲೆನ್ಸೆರ್ ಬೈಕ್‌ಗಳನ್ನು ನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.