ಜಿಲ್ಲೆ

ರಂಗಕಲೆ ಕಲಾವಿದರಿಗೆ ಪ್ರೋತ್ಸಾಹಿಸಲು ನಾಟಕ ವೀಕ್ಷಿಸಿ

ಮಂಜುನಾಥ

ಹೊಸಪೇಟೆ : ರಂಗಕಲೆ ನೋಡುಗರ ಸಂಖ್ಯೆ ಕ್ಷೀಣಿಸಿದೆ ಹೊರತು ಕಲಾವಿದರಿಂದ ರಂಗ ಕಲೆ ನಶಿಸುತ್ತಿಲ್ಲ ಎಂದು ಸಂಗಮೇಶ್ವರ ನಾಟ್ಯ ಸಂಘ ಸಂಚಾಲಕ ಮಂಜು ಗುಳೆದಗುಡ್ಡ ಹೇಳಿದರು.

ನಗರದಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಸೆ.20ರಿಂದ ಮೊದಲ ಬಾರಿಗೆ ಗುಳೆದಗುಡ್ಡ ಸಂಗಮೇಶ್ವರ ನಾಟ್ಯ ಸಂಘದಿAದ ನಾಟಕ ಪ್ರದರ್ಶನವಾಗುತ್ತಿದೆ. ದಿನಕ್ಕೆ ಎರಡು ಪ್ರದರ್ಶನ ಇರಲಿದೆ. ಹುಲಿಂಗಯ್ಯ ತಾಳಿಕೋಟೆ ನಿರ್ದೇಶನದ ಹೌದಲೇ ರಂಗಿ ಊದಲೇನ ಪುಂಗಿ ಕೌಟುಂಬಿಕ ಹಾಗೂ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ಕಲಾ ಆಸಕ್ತರು ಮಾತ್ರವಲ್ಲದೆ ಪ್ರತಿಯೊಬ್ಬರು ಕಲೆಗೆ ಪ್ರೋತ್ಸಾಹಿಸಿ ನಾಟಕ ವೀಕ್ಷಣೆ ಮಾಡಬೇಕಿದೆ ಎಂದರು.

ಈ ಹಿಂದೆ ಹಿರಿಯರು ಮನೆಗಳಲ್ಲಿ ಕಲೆ, ಸಂಗೀತ ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಈಗ ಕಲೆ ಬಗ್ಗೆ ಹೇಳುವುದಕ್ಕೆ ಮುಂದಾದರೂ, ಕೇಳುವುದಕ್ಕೆ ಯಾರು ಸಿದ್ಧರಿಲ್ಲ. ಟಿವಿ, ಸಿನಿಮಾ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಕಲೆಯ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಕನ್ನಡ ರಂಗಭೂಮಿ ಕಲಾವಿದರಲ್ಲಿ ಒಗ್ಗಟ್ಟು ,ಒಳ್ಳೆಯ ಭಾವನೆಯಿದ್ದಲ್ಲಿ ಬೆಳೆಯುವುದಕ್ಕೆ ಏನು ಕೊರತೆಯಿಲ್ಲ. ರಂಗಭೂಮಿ ಕಲಾವಿದರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಕಲಾವಿದನಿಗೆ ಯಾವ ಕಲೆ ಆರಿಸಿಕೊಂಡಿದ್ದೇನೆ ಅರಿತು ಹೆಚ್ಚಿನ ಗಮನ ನೀಡಬೇಕು. ಆ ಕಲೆಯ ಹಿನ್ನೆಲೆ, ಏತಕ್ಕೆ ಮಾಡುತ್ತಿದ್ದೇವೆ, ಕಲೆಗೆ ಬೇಕಾದ ಪರಿಕರಗಳ ಬಗ್ಗೆ ಪರಿಕಲ್ಪನೆ ಇರಬೇಕು. ಜನ ಸ್ಪಂದನೆ ನೀಡುವಂತೆ ನಾಟಕ ಪ್ರದರ್ಶನ ಆಗಬೇಕಿದೆ ಎಂದು ಹೇಳಿದರು.

ರಂಗಭೂಮಿಯಲ್ಲಿ ನಾಟಕ, ಹವ್ಯಾಸಿ ಕಲಾವಿದ, ಬೀದಿ ನಾಟಕ, ಜಾನಪದ ಹೀಗೆ ಸಾಕಷ್ಟು ಪ್ರಕಾರಗಳಿದ್ದು, ಎಲ್ಲ್ಲ ಕಲಾವಿದರು ಒಗ್ಗೂಡಿ ಸಾಕಷ್ಟು ಕಾರ್ಯ ಮಾಡಬೇಕಿದೆ. ಎಲೆಯ ಮರೆಯಂತೆ ಇರುವ ಗ್ರಾಮೀಣ ಪ್ರದೇಶದ ಕಲಾವಿದರನ್ನು ಸಂಘ ಸಂಸ್ಥೆಗಳು ಗುರುತಿಸುವ ಕೆಲಸ ಮಾಡಬೇಕು. ಆರ್ಥಿಕ ಹಿಂದುಳಿದ ಕಲಾವಿದರಿಗೆ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಸಹಾಯಧನ ನೀಡಬೇಕು. ಹಿರಿಯ ಕಲಾವಿದರು ನಿಮ್ಮೊಟ್ಟಿಗೆ ಕಲೆ ಮುಕ್ತಾಯಗೊಳಿಸದೇ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದರು.

ಪ್ರಮುಖರಾದ ಸಂಕ್ರಪ್ಪ ಚೌಡಾಪುರ, ಭಾವಾನಿ ಹಿರಿಯುರು, ಈಶ್ವರ ಹಿರೇಮಠ, ಪಿ.ವೆಂಕಟೇಶ ಇತರರಿದ್ದರು.