ಹೊಸಪೇಟೆ: ನಗರದ ಆರ್‌ಟಿಒ ಕಚೇರಿ ನೌಕರನಿಗೆ ಕರೊನಾ ದೃಢಪಟ್ಟಿದ್ದು, 35ಕ್ಕೂ ಅಧಿಕ ಪ್ರಾಥಮಿಕ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ವಿಷಯ ಗೊತ್ತಾಗುತ್ತಿದ್ದಂತೆ ಕೆಲ ಸಿಬ್ಬಂದಿ, ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಖಾಸಗಿ ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ಗೆ ಮುಂದಾಗಿದ್ದು, ಆರ್‌ಟಿಒ ಕಚೇರಿಗೆ ಬೀಗ ಜಡಿಯಲಾಗಿದೆ.
ವಾಹನಗಳ ನೋಂದಣಿ, ನವೀಕರಣ ಸ್ಥಗಿತಗೊಂಡಿದೆ. ಕಚೇರಿಗೆ ಹರಿದುಬರುತ್ತಿದ್ದ ಲಕ್ಷಾಂತರ ರೂ. ಆದಾಯಕ್ಕೂ ಬ್ರೇಕ್ ಬಿದ್ದಿದೆ. ನೇಕಾರ ಕಾಲನಿಯಲ್ಲಿನ ಸೋಂಕಿತನ ಮನೆ ಸುತ್ತ ನಗರಸಭೆ ಸಿಬ್ಬಂದಿ ಸೀಲ್‌ಡೌನ್ ಮಾಡಿದ್ದಾರೆ. ಈಗಾಗಲೆ ನಗರದ 30ಕ್ಕೂ ಅಧಿಕ ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.