ಹೊಸಪೇಟೆ: ಮಹಾರಾಷ್ಟ್ರ ಹೈಕೋರ್ಟ್ ನ್ಯಾಯಾಧೀಶೆ ಮುರ್ಧಲ್ ಭಟ್ಕರ ಭಾನುವಾರ ಹಂಪಿಗೆ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು. ವಿಜಯ ವಿಠ್ಠಲ ದೇವಸ್ಥಾನ, ಕಮಲಾಪುರದ ವಸ್ತು ಸಂಗ್ರಹಾಲಯ, ರಾಣಿ ಸ್ನಾನಗೃಹ, ಹಜಾರ ರಾಮಚಂದ್ರ ದೇವಾಲಯ, ಕಮಲ ಮಹಲ್, ಗಜಶಾಲೆ, ಉಗ್ರ ನರಸಿಂಹ, ಕಡಲೆಕಾಳು ಗಣೇಶ ಹಾಗೂ ಶ್ರೀ ವಿರೂಪಾಕ್ಷೇಶ್ವರನ ದರ್ಶನ ಪಡೆದರು. ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ, ವಿ .ಹುಲಗಪ್ಪ ಮಾರ್ಗದರ್ಶನ ಮಾಡಿದರು.