ಗಂಗಾವತಿ: ತಾಲೂಕಿನ ಹೊಸಳ್ಳಿಯ ಶ್ರೀ ಗಂಗಾದೇವಿ ಜಾತ್ರಾಮಹೋತ್ಸವ ನಿಮಿತ್ತ ಮಹಾರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
ಗಂಗಾಮತ ಸಮಾಜ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಹಮ್ಮಿಕೊಂಡಿದ್ದು, ಮೊದಲ ಬಾರಿಗೆ ನೂತನ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಹೋಮ, ಪೂರ್ಣಾಹುತಿ, ಮಡಿತೇರು, ಸಾಮೂಹಿಕ ವಿವಾಹ ಮತ್ತು ಪ್ರಸಾದ ವಿತರಣೆ ಜರುಗಿತು. ಇದಕ್ಕೂ ಮುನ್ನ ಗಂಗಾದೇವಿ ಮೂರ್ತಿಯನ್ನು ಕುಂಭ, ಕಳಸದೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿದರು. ಸಂಜೆ ಸರ್ವಾಲಂಕೃತ ರಥೋತ್ಸವನ್ನು ಪಾದಗಟ್ಟೆವರೆಗೆ ಅದ್ದೂರಿಯಾಗಿ ನೆರವೇರಿಸಲಾಯಿತು.
ಗಂಗಾಮತ ಸಮಾಜ ಹೊಸಳ್ಳಿ ಘಟಕದ ಅಧ್ಯಕ್ಷ ಕೆ.ಹನುಮೇಶ, ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕಾಧ್ಯಕ್ಷ ಹನುಮೇಶ ಬಟಾರಿ, ಮುಖಂಡರಾದ ಸಿದ್ದಪ್ಪ, ಮರಿಯಪ್ಪ, ಕೆ.ಸಿದ್ದಪ್ಪ, ಎಸ್.ಕನಕರಾಯ, ಶ್ರೀನಿವಾಸ್, ಕೆ.ದುರುಗಪ್ಪ, ಕೆ.ಕನಕರಾಯ, ಹುಲುಗಪ್ಪ, ಪಿ.ಸಿದ್ದು, ಎಸ್.ವೀರೇಶ, ಭೋಗೇಶ ಆನೆಗೊಂದಿ, ರಮೇಶ, ವಿರುಪಣ್ಣ ಇತರರಿದ್ದರು.