ಜಿಲ್ಲೆ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೋಬಳಿಯ ತಮ್ಮರಸನಹಳ್ಳಿಯ ಹಜರತ್ ನೂರ್ ಷಾ ವಲಿ ಹಾಗೂ ಹಜರತ್ ಪೀಡ್ ಷಾ ವಲಿ ಕಮಿಟಿ ಸಂಯುಕ್ತ ಅಶ್ರಯದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಉರುಸ್ ಹಾಗೂ ಖವ್ವಾಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು-ಮುಸ್ಲಿಮರ ನಡುವೆ ಸಾಮಾಜಿಕ ಸಾಮರಸ್ಯ ಮೂಡಬೇಕು. ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮಗಳ ನಡುವಿನ ಕಂದಕ ತೊಲಗಿ, ಅಭಿವೃದ್ಧಿ ಪಥದ ಆಶಯದಲ್ಲಿ ಸಾಗಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಯಾವುದೇ ದ್ವೇಷ, ಅಸೂಯೆಗಳಿಗೆ ಅವಕಾಶ ನೀಡದೆ, ಸಹೋದರ ತತ್ವದಿಂದ ಬದಕುಕಟ್ಟಿಕೊಳ್ಳೋಣ ಎಂದರು.
ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿ, ಸಾಮಾಜಿಕ ಸಮಾನತೆಗೆ ನಾವು ಬದ್ಧರಾಗಿದ್ದು, ಯಾವುದೇ ಜಾತಿ ಮೇಲು-ಕೀಳು ಎಂಬ ಧೋರಣೆ ಬಿಟ್ಟು, ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಜೀವಿಸೋಣ ಎಂದರು.
ಗಿಡ್ಡಪ್ಪನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಕ್ಬರ್ ಅಲಿಖಾನ್, ಮುಖಂಡರಾದ ನಾಸಿರ್‌ಬೇಗ್, ಅಪ್ಜಲ್, ಸಮೀರಖಾನ್, ಲೂಹಿದ್, ಸಲ್ಮಾನ್‌ಷರ್ೀ, ಸೈಯದ್‌ಪೀರ್, ನ್ಯಾಮುತ್ ಉಲ್ಲಾಬೇಗ್, ಮುಜಾಹೀದ್ದಿನ್, ಅಮ್ಜದ್‌ಬೇಗ್ ಇತರರು ಇದ್ದರು.