ಜಿಲ್ಲೆ

ಹೊಸಕೋಟೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಒತ್ತು

ಶಿವರಾಜ.ಎಂ

ಹೊಸಕೋಟೆ: ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ನೀಟ್ಟಿನಲ್ಲಿ ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಪ್ರಯತ್ನ ನೆಡೆಸುತಿದ್ದು, ಈ ಬಗ್ಗೆ ವೇಲೂರ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಉಪಕುಲಪತಿಗಳಾದ ಡಾ ಶೇಖರ್ ವಿಶ್ವನಾಥನ್ ಹಾಗೂ ರಾಜ್ಯ ಸಭದ ಮಾಜಿ ಸದಸ್ಯ ಎಂ ವಿ ರಾಜೀವ್ ಗೌಡ ರೊಂದಿಗೆ ಚರ್ಚೆ ಮಾಡಲಾಗಿದ್ದು, ಮುಂದಿನ 2024-25 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಮೂಲ ಸೌಲಭ್ಯ ಒದಗಿಸಲು ಬದ್ಧರಾಗಿದ್ದು ಎಲ್ಲ ರೀತಿಯ ಸಮಾಲೋಚನೆಗಳು ನಡೆಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.