ಮೈಸೂರು: ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಸಹುಂಡಿ ರಘು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಾಪ್‌ಕಾಮ್ಸ್ ಅಧ್ಯಕ್ಷರಾಗಿದ್ದ ಮಿರ್ಲೆ ಅಣ್ಣೇಗೌಡ ಅವರು ಆಂತರಿಕ ಒಪ್ಪಂದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ಘೋಷಣೆ ಆಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ರಘು ಅವರ ಹೆಸರನ್ನು ಅಣ್ಣೇಗೌಡ ಸೂಚಿಸಿದರೆ ಎಲ್ಲ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರಘು ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ವಸಂತಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ರಘು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನಾನು ಈ ಹಿಂದೆ ಮೈಸೂರು ಎಪಿಎಂಸಿ ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ, ಗ್ರಾ.ಪಂ. ಸದಸ್ಯನಾಗಿ, ಭೂನ್ಯಾಯ ಮಂಡಳಿ ಸದಸ್ಯನಾಗಿ, ಹೊಸಹುಂಡಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷನಾಗಿ, ಕರ್ನಾಟಕ ಭೂಸೇನಾ ನಿಗಮದ ನಿರ್ದೇಶಕನಾಗಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ನನಗೆ ರೈತರು ಮತ್ತು ಗ್ರಾಹಕರ ಸಮಸ್ಯೆಗಳ ಅರಿವಿದ್ದು, ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಗ್ರಾಹಕರಿಗೆ ಗುಣಮಟ್ಟದ ಹಣ್ಣು-ತರಕಾರಿಗಳನ್ನು ಸರಬರಾಜು ಮಾಡುವುದರೊಂದಿಗೆ ಹಾಪ್‌ಕಾಮ್ಸ್ ಸಿಬ್ಬಂದಿ ಹಿತವನ್ನು ಕಾಯಲು ಬದ್ಧನಾಗಿದ್ದೇನೆ. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.
ಮಾಜಿ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಬಿ.ಪಿ.ಬೋರೇಗೌಡ, ಉಪಾಧ್ಯಕ್ಷ ಆರ್.ಸರ್ವೇಶ್, ನಿರ್ದೇಶಕ ಜೆ.ಮಹಾದೇವ, ಬಿ.ಎನ್. ಪ್ರಭುಸ್ವಾಮಿ, ಟಿ.ರಾಮೇಗೌಡ, ವೈ.ಜಿ.ಮಹೇಂದ್ರ, ಎಸ್.ಆರ್.ಶ್ರೀನಿವಾಸ್, ಡಿ.ಪದ್ಮನಾಭ್, ಕೆ.ಸುಜಾತಾ, ಎಸ್.ಜಿ.ನಳಿನಿ, ಎಚ್.ಎಸ್.ಚಂದ್ರೇಗೌಡ, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಇಂದೂಧರ್ ಇತರರಿದ್ದರು.