ಹೊಸದುರ್ಗ: ಕರೊನಾ ತನ್ನ ಅಟ್ಟಹಾಸ ಮೆರೆಯತ್ತಿರುವ ಈ ವೇಳೆ ವಿವಿಧ ರೀತಿ ಸಹಕಾರ, ಜನರಲ್ಲಿ ಜಾಗೃತಿ ಮೂಡಿಸಲು ಮಠಗಳನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಮುಖ ಮಠಾಧೀಶರ ಸಭೆಯನ್ನು ಕರೆಯಬೇಕು. ಜತೆಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಕರೆದು ಸಲಹೆ ಪಡೆಯಬೇಕು.
ಕರೊನಾ ಹೊಗಲಾಡಿಸಲು ಏನು ಮಾಡಬೇಕು ಎಂಬ ಕುರಿತು ಚರ್ಚಿಸಬೇಕು. ಜತೆಗೆ ಕರೊನಾ ತಡೆಗೆ ಮಠಾಧೀಶರನ್ನು ರಾಯಭಾರಿಗಳನ್ನಾಗಿಸಿಕೊಳ್ಳಬೇಕು. ಈ ಮೂಲಕ ಮಹಾಮಾರಿಯನ್ನು ತೊಲಗಿಸಲು ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.