ಜಿಲ್ಲೆ

ಪಶು ಪ್ರೀತಿ ಮೆರೆದ ಗೂಳಿಹಟ್ಟಿ

Chitradurga

ಹೊಸದುರ್ಗ: ಲಾಕ್‌ಡೌನ್‌ನಿಂದ ಮೇವಿಲ್ಲದೆ ಸಮಸ್ಯೆಗೆ ಸಿಲುಕಿದ್ದ ಪಟ್ಟಣ ಸಮೀಪದ ಹುಳಿಯಾರು ರಸ್ತೆಯ ಸುರಭಿ ಗೋಶಾಲೆ ಜಾನುವಾರುಗಳಿಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸ್ವಂತ ಹಣದಲ್ಲಿ ಪಶು ಆಹಾರ, ಮೇವು ಪೂರೈಕೆ ಮಾಡಿ ಪ್ರಾಣಿ ಪ್ರೀತಿ ತೋರಿದ್ದಾರೆ.

ಮೇವಿಲ್ಲದೆ ಗೋವುಗಳು ನರಳುತ್ತಿದ್ದ ವಿಷಯವನ್ನು ಇಸ್ಕಾನ್ ಸಂಸ್ಥೆಯ ಸಂಕರ್ಷಣ ದಾಸ್ ಶಾಸಕರ ಗಮನಕ್ಕೆ ತಂದು ಸಹಾಯ ಮಾಡುವಂತೆ ಕೋರಿದ್ದರು.

ಸ್ಪಂದಿಸಿದ ಶಾಸಕರು ಕೂಡಲೇ ಗೋಶಾಲೆಗೆ ಭೇಟಿ ನೀಡಿ ಸ್ವಂತ ಹಣದಲ್ಲಿ 30 ಸಾವಿರ ಮೌಲ್ಯದ ಪಶು ಆಹಾರ ಹಾಗೂ ಮೇವು ನೀಡುವ ಜತೆಗೆ ಗೋಶಾಲೆ ನಿರ್ವಹಣೆಗೆ ನಿರಂತರವಾಗಿ ಸಹಕಾರ ನೀಡುವ ಭರವಸೆ ನೀಡಿದರು.

ನಂತರ ಮಾತನಾಡಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್,ಪ್ರಾಣಿಗಳ ಹಸಿವನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟಕ್ಕೆ ಸಿಲುಕಿರುವ ಪ್ರಾಣಿ ಪಕ್ಷಿಗಳಿಗೆ ನೆರವಾಗುವ ಭಾಗ್ಯವನ್ನು ಭಗವಂತ ನನಗೆ ಕರುಣಿಸಿರುವುದು ನನ್ನ ಪಾಲಿನ ಭಾಗ್ಯ. ಇಂತಹ ಕೆಲಸಗಳು ಬದುಕಿಗೆ ಸಾರ್ಥಕತೆ ನೀಡುತ್ತವೆ ಎಂದರು.