ಜಿಲ್ಲೆ

ಹಸು ಮೇಯಿಸಲು ಹೋದಾಗ ಹೆಜ್ಜೇನು ದಾಳಿ: ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವು

ಹೊಸದುರ್ಗ: ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಹೆಜ್ಜೇನು ಕಡಿದು ಗಾಯಗೊಂಡಿದ್ದ ಮಹಿಳೆ ಗುರುವಾರ ಮೃತಪಟ್ಟಿದ್ದಾಳೆ.

ಯಶೋದಮ್ಮ (45) ಮೃತ ಮಹಿಳೆ. ಬುಧವಾರ ಹಸುಗಳನ್ನು ಮೇಯಿಸಲು ಪಕ್ಕದ ಲಿಂಗದಹಳ್ಳಿಯಲ್ಲಿರುವ ಜಮೀನಿಗೆ ಹೋದಾಗ ಹೆಜ್ಜೇನು (giant bee) ದಾಳಿ ನಡೆಸಿವೆ.

ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ವೈದ್ಯರ ಸಲಹೆಯಂತೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.