ಕೆ.ಆರ್. ಪುತ್ರನ್  
ಜಿಲ್ಲೆ

ಹೊಸಬೆಟ್ಟು ಕೆ.ಆರ್. ಪುತ್ರನ್

Chethan padubidri
ಮಂಗಳೂರು: 124 ಇತಿಹಾಸ ಇರುವ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ (94) ಅವರು ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಅವರು ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಮೊಗವೀರ ವ್ಯವಸ್ಥಾಪಕ ಮಂಡಳಿಯ ದೀರ್ಘಕಾಲದ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡಿರುವ ಅವರು ಮೊಗವೀರ ಸಮಾಜದ ಪ್ರಥಮ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಆಗಿದ್ದರು. ಮುಂಬಯಿ ಮುಕ್ತಾನಂದ ಪ್ರೌಢಶಾಲೆಯ ಸ್ಥಾಪಕರಾಗಿದ್ದರು. ಮಹಾರಾಷ್ಟ್ರ ಸರ್ಕಾರದ ಸಚಿವರುಗಳಿಂದ ಜೀವಮಾನ ಸಾಧಕ ಪ್ರಶಸ್ತಿಯನ್ನು ಪಡೆದಿದ್ದರು.
ಅವರ ನಿಧನಕ್ಕೆ ಮೊಗವೀರ ವ್ಯವಸ್ಥಾಪಕ ಮಂಡಳಿ ದಕ್ಷಿಣ ಕನ್ನಡ-, ಉಡುಪಿ ಶಾಖೆ ಹಾಗೂ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆಯು ಸಂತಾಪವನ್ನು ಸೂಚಿಸಿದೆ.