ಚಾಂಪಿಯನ್ ಪಟ್ಟ ಅಲಂಕರಿಸಿದ ಸೊರಬ ತಾಲೂಕಿನ ಹೊಸಬಾಳೆಯ ಶ್ರೀಮತಿ ಶಕುಂತಲಾ ಪ್ರೌಢಶಾಲೆ ತಂಡದ ಜತೆಗೆ ಶಿಕ್ಷಕರು ಹಾಗೂ ಪ್ರಮುಖರು.  
ಜಿಲ್ಲೆ

ಹೊಸಬಾಳೆ ಶಕುಂತಲಾ ಪ್ರೌಢಶಾಲೆ ಚಾಂಪಿಯನ್

Shivamogga - Desk - Vinayakumar D B

ಸೊರಬ: ತಾಲೂಕಿನ ಬಿಳುವಾಣಿ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಉಳವಿ ವಲಯ ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಹೊಸಬಾಳೆಯ ಶ್ರೀಮತಿ ಶಕುಂತಲಾ ಪ್ರೌಢಶಾಲೆಯು ಬಾಲಕ ಹಾಗೂ ಬಾಲಕಿ ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜತೆಗೆ ಶಾಲೆಯ ಎ.ಒ.ರಾಕೇಶ್ ಬಾಲಕರ ವಿಭಾಗದಲ್ಲಿ ವೀರಾಗ್ರಣಿ ಎನಿಸಿದರು.

ಬಾಲಕಿಯರ ವಿಭಾಗ: ನವ್ಯಾ 3000 ಹಾಗೂ 1500 ಮೀ. ಓಟ ಪ್ರಥಮ, 800 ಮೀ.ನಲ್ಲಿ ದ್ವಿತೀಯ. 4100 ರಿಲೇಯಲ್ಲಿ ಪ್ರಥಮ. ಇ.ಎ.ಲತಾ 3,000, 1500 ಮೀ. ಓಟದಲ್ಲಿ ದ್ವಿತೀಯ, ತ್ರಿಪಲ್ ಜಂಪ್‌ನಲ್ಲಿ ಸೌಜನ್ಯಾ ಪ್ರಥಮ, 200 ಮೀ. ಓಟ ಹಾಗೂ ಲಾಂಗ್‌ಜಂಪ್‌ನಲ್ಲಿ 3ನೇ ಸ್ಥಾನ, 4100 ರೀಲೆಯಲ್ಲಿ ಪ್ರಥಮ. ವನಜಾಕ್ಷಿ ಲಾಂಗ್‌ಜಂಪ್‌ನಲ್ಲಿ ಪ್ರಥಮ, 100 ಹಾಗೂ 200 ಮೀ. ಓಟದಲ್ಲಿ ದ್ವಿತೀಯ, 4400 ರಿಲೇಯಲ್ಲಿ ಪ್ರಥಮ. ಭಾಗೀರಥಿ 400 ಮೀ. ಓಟದಲ್ಲಿ ತೃತೀಯ, 4100 ರಿಲೇಯಲ್ಲಿ ಪ್ರಥಮ. ಉಷಾ ನಡಿಗೆಯಲ್ಲಿ ದ್ವಿತೀಯ, ಸ್ವಾತಿ ಜಾವಲಿನ್‌ನಲ್ಲಿ ಪ್ರಥಮ, ಹ್ಯಾಮರ್ ಥ್ರೋನಲ್ಲಿ ದ್ವಿತೀಯ, ಪೋಲೋ ವಾಟ್‌ನಲ್ಲಿ ಧನ್ಯಾ ದ್ವಿತೀಯ, ಹೈಜಂಪ್‌ನಲ್ಲಿ ತೃತೀ, ರಕ್ಷಿತಾ ಹೈಜಂಪ್‌ನಲ್ಲಿ ದ್ವಿತೀಯ, ಕೃತಿಕಾ ತಟ್ಟೆ ಎಸೆತದಲ್ಲಿ ತೃತೀಯ ಸ್ಥಾನ ಪಡೆದರು.
ಬಾಲಕರ ವಿಭಾಗ: ರಾಕೇಶ್ 400, 800, 1500 ಮೀ. ಓಟದಲ್ಲಿ ಪ್ರಥಮ, 4100 ರೀಲೆಯಲ್ಲಿ ಬೆಳ್ಳಿ, ಮನು 200 ಮೀ. ಓಟ, ಲಾಂಗ್‌ಜಂಪ್‌ನಲ್ಲಿ ಪ್ರಥಮ, 4100 ರೀಲೆಯಲ್ಲಿ ಬೆಳ್ಳಿ, ಧನುಷ್ 3000 ಮೀ., 1500 ಮೀ. ಓಟದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ, ಪೋಲ್‌ವಾಲ್ಟ್‌ನಲ್ಲಿ ದ್ವಿತೀಯ, ಸಾತ್ವಿಕ್ ಜಾವಲಿನ್‌ನಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ತೃತೀಯ, ಮನೋಜ್ ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಉಲ್ಲಾಸ್ 3,000 ಮೀ. ಓಟದಲ್ಲಿ ದ್ವಿತೀಯ, ರಹಾನ್ ತಟ್ಟೆ ಎಸೆತದಲ್ಲಿ ದ್ವಿತೀಯ, ಹ್ಯಾಮರ್ ಥ್ರೋನಲ್ಲಿ ದ್ವಿತೀಯ, ಷಣ್ಮುಖ ಹರ್ಡಲ್ಸ್‌ನಲ್ಲಿ ತೃತೀಯ, ಮನೋಜ್ 4100 ರಿಲೇಯಲ್ಲಿ ದ್ವಿತೀಯ, ಶ್ರೀಪಾದ 4100 ರಿಲೇಯಲ್ಲಿ ದ್ವಿತೀಯ, ಉಲ್ಲಾಸ್ ನಡಿಗೆಯಲ್ಲಿ ತೃತೀಯ ಸ್ಥಾನ ಗಳಿಸಿದರು.