ಜಿಲ್ಲೆ

ತೋಟಗಾರಿಕೆ ಬೆಳೆಗೆ ಲಾಕ್​ಡೌನ್ ಬಿಸಿ

Gadag

ವಿಜಯವಾಣಿ ಸುದ್ದಿಜಾಲ ಡಂಬಳ

ಕರೊನಾ ವೈರಸ್ ಹಾಗೂ ಮಂಗಳವಾರ ರಾತ್ರಿ ಸುರಿದ ಗಾಳಿ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಡಂಬಳ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಬಾಳೆ, ಪಪ್ಪಾಯಿ, ಚಿಕ್ಕು, ನುಗ್ಗೆಕಾಯಿ, ಬದನೆಕಾಯಿ, ಟೊಮ್ಯಾಟೊ, ಉಳ್ಳಾಗಡ್ಡಿ ಸೇರಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದಿದ್ದು,

ಸದ್ಯ ಕಟಾವು ಹಂತದಲ್ಲಿವೆ. ಆದರೆ, ಖರೀದಿಸುವವರಿಲ್ಲದ ಕಾರಣ ಬೆಳೆ ಜಮೀನಿನಲ್ಲೇ ಕೊಳೆಯಲಾರಂಭಿಸಿದೆ. ಕಷ್ಟಪಟ್ಟು ಬೆಳೆದ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಡಂಬಳ ಗ್ರಾಮದ ರೈತ 4 ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದ. ಅದಕ್ಕೆ 3-4 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈಗ ಬಾಳೆ ಮೊದಲನೇ ವರ್ಷದ ಕಟಾವು ಹಂತಕ್ಕೆ ಬಂದಿದೆ. ಆದರೆ, ಮಂಗಳವಾರ ಗಾಳಿ ಮಳೆಗೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.

ಡಂಬಳ ಗ್ರಾಮದ ಬಸಪ್ಪ ಹಾದಿಮನಿ ತಮ್ಮ 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಬಿತ್ತನೆಗೆ ಕೀಟನಾಶಕ, ಗೊಬ್ಬರ, ಕೂಲಿ ಆಳು ಹೀಗೆ ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಉತ್ತಮ ಫಸಲು ಬಂದಿದೆ. ಕಟಾವು ಕೂಡ ಮಾಡಿದ್ದಾರೆ. ಅದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್ ಆಗಿರುವುದರಿಂದ ಸಂಗ್ರಹಿಸಿರುವ ಉಳ್ಳಾಗಡ್ಡಿ ಕೊಳೆಯುತ್ತಿದೆ.

ಗ್ರಾಮದ ರೈತ ಮರದನಸಾಬ್ ಡೋಲಿ ತಮ್ಮ 2 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದೆ. ಆದರೆ, ಖರೀದಿದಾರರಿಲ್ಲದೇ ಹಾಗೂ ಸೂಕ್ತ ಬೆಲೆ ಇರದ ಕಾರಣ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಗಾಳಿ, ಮಳೆಗೆ ಹಾಳಾದ ಬಾಳೆ, ಪಪ್ಪಾಯಿ, ನುಗ್ಗೆಕಾಯಿ, ಇತರೆ ಬೆಳೆಯನ್ನು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ವರದಿ ಕಳಿಸಲಾಗುತ್ತದೆ.| ವೈ.ಎಚ್. ಜಾಲವಾಡಗಿಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆಹಿಂಗಾರಿಯಲ್ಲಿ ಉಳ್ಳಾಗಡ್ಡಿ ಉತ್ತಮ ಬೆಲೆ ಇರುತ್ತದೆಂದು ಸಾಕಷ್ಟು ರೈತರು ಬೇಸಿಗೆ ಬಿತ್ತನೆ ಮಾಡಿದ್ದಾರೆ. ಈಗ ಕಟಾವಿಗೆ ಬಂದಿದೆ. ಕರೊನಾ ಹಾವಳಿಯಿಂದ ಮಾರುಕಟ್ಟೆ ಬಂದ್ ಆಗಿದ್ದು, ಖರೀದಾರರು ಮುಂದೆ ಬರುತ್ತಿಲ್ಲ. ಜಮೀನಿನಲ್ಲೇ ಬೆಳೆ ಕೊಳೆಯತೊಡಗಿದೆ.| ಬಸಪ್ಪ ಹಾದಿಮನಿ ಉಳ್ಳಾಗಡ್ಡಿ ಬೆಳೆಗಾರಬಾಳೆ ಬೆಳೆ ಉತ್ತಮವಾಗಿ ಬಂದಿದೆ. ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ, ಮಂಗಳವಾರ ಗಾಳಿ, ಮಳೆಗೆ ಬಾಳೆ ಗಿಡ ಸಮೇತ ನಲಕ್ಕುರುಳಿದ್ದು. ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ರೈತರ ಸಮಸ್ಯೆ ಕೇಳಲು ಅಧಿಕಾರಗಳು ಮುಂದೆ ಬರುತ್ತಿಲ್ಲ.| ಕುಮಾರ ಗವಿಸಿದ್ದಪ್ಪ ಮಾನೆ ಬಾಳೆ ಬೆಳೆಗಾರ