ಜಿಲ್ಲೆ

ಭೀಕರ ಅಪಘಾತ ಮೂವರ ಸಾವು ಬೆಂಗಳೂರು ಮೈಸೂರು ದಶಪಥದಲ್ಲಿ ಘಟನೆ

ಬೆಂಗಳೂರು ಮೈಸೂರು ದಶಪಥ‌ ಹೆದ್ದಾರಿಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ಸೋಮವಾರ ಸಂಜೆ ತಾಲೂಕಿನ‌‌ ಲಂಬಾಣಿ ತಾಂಡ್ಯದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಫಾರ್ಚುನರ್ ಕಾರೊಂದು ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪಾರ್ಚುನರ್ ಕಾರು ರಸ್ತೆ ವಿಭಜಕ ದಾಟಿ, ಬೆಂಗಳೂರು ಕಡೆಯ ರಸ್ತೆಗೆ ನುಗ್ಗಿದೆ.

ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಯಾಂಟ್ರೋ , ಇನ್ನೋವಾ, ಸ್ಕಾರ್ಪಿಯೋ ಸೇರಿದಂತೆ ಹಲವು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಸ್ಯಾಟ್ರೋ ಕಾರಿನಲ್ಲಿದ್ದ 5 ಮಂದಿಯಲ್ಲಿ ರೇಣುಕಮ್ಮ, ಮಂಜುಳಮ್ಮ, ಸುಧೀರ್ ಎನ್ನುವರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಹಾಸನ ಮೂಲದವರು ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಫಾರ್ಚುನರ್ ಕಾರಿನಲ್ಲಿದ್ದವರಿಗೂ ಗಾಯಗಳಾಗಿದ್ದು, ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಚುನರ್ ಕಾರು ನಿಯಂತ್ರಣ ತಪ್ಲಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.