ಜಿಲ್ಲೆ

ಹಾಪ್ ಕಾಮ್ಸ್‌ನಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು-ತರಕಾರಿ ಮಾರಾಟ

ಬೆಂಗಳೂರು: ಹಾಪ್‌ಕಾಮ್ಸ್ ಸಂಸ್ಥೆಯು ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಸಲುವಾಗಿ ಇದೇ ಮೊದಲ ಬಾರಿಗೆ ನಿರುದ್ಯೋಗಿ ಯುವಕ/ಯುವತಿಯರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು-ತರಕಾರಿ ಮಾರಾಟಕ್ಕಾಗಿ ‘ಸಂಚಾರಿ ಮಾರಾಟ ಯೋಜನೆ’ಆರಂಭಿಸುತ್ತಿದೆ.

ಸಂಚಾರಿ ವ್ಯಾಪಾರ ಮಾಡಲು ಬರುವ ಖಾಸಗಿಯವರಿಗೆ ನಿರ್ದಿಷ್ಟ ವ್ಯಾಪಾರ ಗುರಿ ಗುರಿಪಡಿಸಿ ಸಂಸ್ಥೆಯಿಂದಲೇ ಹಣ್ಣು-ತರಕಾರಿಗಳನ್ನು ಮಾರಾಟಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ಸಂಚಾರಿ ವಾಹನ ಸಹ ಒದಗಿಸಲಾಗುತ್ತದೆ. (ಖಾಸಗಿಯವರೇ ವಾಹನ ಹೊಂದಿದ್ದಲ್ಲಿ ಸಂಸ್ಥೆಯೇ ಪ್ರತ್ಯೇಕ ಬಾಡಿಗೆಯನ್ನು ಪಾವತಿಸಲಿದೆ) ವ್ಯಾಪಾರ ಮಾಡಲು ಅಪಾರ್ಟ್‌ಮೆಂಟ್‌ಗಳ ಸ್ಥಳಗಳನ್ನು ಸಂಸ್ಥೆಯೂ ನಿಗದಿಪಡಿಸಿಕೊಡಲಿದೆ.

ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು, ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳಿಗೆ ತಾಜಾ ಹಣ್ಣು-ತರಕಾರಿಗಳನ್ನು ಕಡಿಮೆ ದರಗಳಲ್ಲಿ ಮರಾಟ ಮಾಡುವುದು ಇದರ ಉದ್ದೇಶ. ಮಾರಾಟ ಮಾಡಲು ಬರುವ ಆಸಕ್ತರಿಂದ ನಿಗದಿತ ಮೊತ್ತವನ್ನು ಡಿಪಾಸಿಟ್ ರೂಪದಲ್ಲಿ ಕಟ್ಟಿಸಿಕೊಳ್ಳಲಾಗುವುದು. ತಿಂಗಳಿಗೆ ನಡೆಸುವ ವಹಿವಾಟು ಆಧಾರದಲ್ಲಿ ಶೇ.10 ಪ್ರೋತ್ಸಾಹಧನ ನೀಡಲಾಗುವುದು ಎಂದು ಹಾಪ್‌ಕಾಮ್ಸ್ ತಿಳಿಸಿದೆ. ಆಸಕ್ತರು ಮೊ: 92411 33552 ಸಂಪರ್ಕಿಸಬಹುದು.