ಮಂಡ್ಯ: ರಾಜ್ಯ ಸರ್ಕಾರ ಸಹಕಾರ ಸಂಸ್ಥೆಗಳ ಬಲವರ್ಧನೆ ಮಾಡಲು ಹಲವು ಅಭಿವೃದ್ದಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ರಾಜ್ಯ ಸಹಕಾರ ತೋಟಗಾರಿಕಾ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತಾ ಹೇಳಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಜಿಲ್ಲಾ ಹಾಪ್ ಕಾಮ್ಸ್ ಆಡಳಿತ ಮಂಡಳಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ನಿಯೋಗ ತಂಡ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದರು. ಹಣ್ಣು ಮತ್ತು ತರಕಾರಿ ಸಾಗಾಣಿಕೆಗೆ ವಾಹನಗಳ ಸರಬರಾಜು ಮಾಡಿದ್ದೇವೆ. ಅದರಂತೆ ಮಂಡ್ಯಕ್ಕೆ 2 ವಾಹನಗಳನ್ನು ನೀಡಲಾಗಿದೆ. ಹಾಪ್‌ಕಾಮ್ಸ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಆಡಳಿತ ಮಂಡಳಿಯು ಅಭಿವೃದ್ದಿ ಚಿಂತನೆಯಲ್ಲಿ ಸಾಗುತ್ತಿದ್ದಾರೆ ಎಂದು ಪ್ರಶಂಸಿದರು.
ಮುಂದಿನ ದಿನಗಳಲ್ಲಿ ಮಂಡ್ಯ ಹಾಪ್ ಕಾಮ್ಸ್ ಜಾಗದಲ್ಲಿ ಉತ್ತಮ ಮಳಿಗೆ ನಿರ್ಮಾಣವಾಗಲಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಉತ್ತಮ ಜಾಗ ಖರೀದಿಸಿದ್ದಾರೆ. ನಮ್ಮ ನಿಮ್ಮ ಅವಯಲ್ಲಿ ಅನುದಾನಕ್ಕೆ ಒತ್ತಾಯಿಸುತ್ತೇವೆ. ಕಟ್ಟಡ ನಿರ್ಮಾಣದ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಅವರೊಂದಿಗೆ ಚರ್ಚಿಸಿ ಉನ್ನತಮಟ್ಟದ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಮಾತ್ರವಲ್ಲದೆ ಲೋಕೋಪಯೋಗಿ ಸಚಿವರು ಮತ್ತು ಅಕಾರಿಗಳೊಂದಿಗೆ ಮಾತನಾಡಿದ್ದೇವೆ. ಸ್ಥಳೀಯವಾಗಿ ಲೋಕೋಪಯೋಗಿ ಸ್ಥಳಗಳಲ್ಲಿ ಮಳಿಗೆಗಳನ್ನು ಕಟ್ಟಿಸಿ, ಹಣ್ಣು-ತರಕಾರಿ ಮಾರುಕಟ್ಟೆ ಮಾಡಲು ಒತ್ತಾಯಿಸಲಾಗಿದೆ. ಅಧಿಕಾರಿಗಳಿಗೆ ಪತ್ರಮುಖೇನ ಸೂಚನೆ ನೀಡಲಿದ್ದು, ಇನ್ನೇನು ಜಾರಿಯಾಗುವ ಹಂತದಲ್ಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮಣ್ಣಗೌಡ, ಸಂಘವು ಆರ್ಥಿಕವಾಗಿ ಸಬಲವಾಗಿಲ್ಲದ ಕಾರಣ ಕೆ.ಎಚ್.ಎ್ ವತಿಯಿಂದ ಹಲವು ರೀತಿಯ ಅಭಿವೃದ್ಧಿಗಳಿಗಾಗಿ ಅನುದಾನವನ್ನು ನೀಡಬೇಕಿದೆ. 2005ರಲ್ಲಿ ಹೈವೆ ರಸ್ತೆಯಂಚಿನಲ್ಲಿ 3 ಗುಂಟೆ ಜಾಗವನ್ನು ಪ್ರತಿ ಗುಂಟೆಗೆ 14 ಸಾವಿರ ರೂ ನೀಡಿ ಖರೀದಿಸಲಾಗಿದೆ. ಈಗ 3 ಕೋಟಿ ರೂ ಬೆಲೆಯಾಗಲಿದೆ. ಆದ್ದರಿಂದ ಸರ್ಕಾರ ಅನುದಾನ ನೀಡಿದರೆ ಉತ್ತಮ ಜಿಲ್ಲಾ ಹಾಪ್ ಕಾಮ್ಸ್ ಮಳಿಗೆಗಳು ನಿರ್ಮಾಣವಾಗಲಿವೆ ಎಂದು ಮನವಿ ಮಾಡಿದರು.
ಸಂಘದ ವ್ಯಾಪಾರ ವಹಿವಾಟು ವೃದ್ದಿಸಲು ಅನುದಾನ ಬೇಕಿದೆ. ಜ್ಯೂಸ್ ಮೆಷಿನ್, ಎಲೆಕ್ಟ್ರಾನಿಕ್ ಸ್ಪಾಟ್ ಬಿಲ್ಲಿಂಗ್ ವೇಯಿಂಗ್ ಬ್ಯಾಟರಿ ಬ್ಯಾಕಪ್ ಮೆಷಿನ್, 10 ಮಾರಾಟ ಮಳಿಗೆ ನವೀಕರಣ, 1 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಮಾರಾಟ ಮಳಿಗೆ, ಪ್ಯಾಕಿಂಗ್ ಕೇಂದ್ರ, ಉಗ್ರಾಣ, ರೈತರ ತರಬೇತಿ ಕೇಂದ್ರ, ಇತರೆ ಕೊಠಡಿ ಅಗತ್ಯವಿದೆ. ವಾಹನಗಳಿಗೆ ಲೋಡ್ ಅಥವಾ ಅನ್‌ಲೋಡ್‌ಗಳ ಸ್ಥಳಾವಕಾಶದಲ್ಲಿ ನೆಲಕ್ಕೆ ಟೈಲ್ಸ್ ಅಥವಾ ಸಿಮೆಂಟ್ ಪ್ಲೋರಿಂಗ್ ಮತ್ತು ಮೇಲ್ಚಾವಣಿ ನಿರ್ಮಾಣಕ್ಕಾಗಿ 25 ಲಕ್ಷ ರೂಗಳ ಬೇಡಿಕೆ ಇದೆ ಎಂದು ಮನವಿ ಸಲ್ಲಿಸಿದರು.
ನಿಯೋಗದ ಈಶ್ವರ ಚಂದ್ರ, ಶಿವರಾಜ ಹೊಸಮನಿ, ರಮೇಶ್ ಚೆಂಗಪ್ಪ, ಲಕ್ಷ್ಮೀನಾರಾಯಣ ಉಡುಪ, ವೈ.ಎಸ್.ಪಾಟೀಲ್, ಚಾಮರಾವ್ ಕುಲಕರ್ಣಿ, ಧನಲಕ್ಷ್ಮೀ ರಾಜು, ಬಸವರಾಜು, ಎನ್.ಎಸ್.ಭಟ್, ಶಂಕರರೆಡ್ಡಿ, ಪಿ.ಎಸ್.ಪರಶುರಾಮ, ನಟರಾಜ್ ಜಿಲ್ಲಾ ಹಾಪ್ ಕಾಮ್ಸ್ ಕಚೇರಿ, ಆಧುನಿಕ ಮಾರಾಟ ಮಳಿಗೆ, ನವೀಕರಣ ಹಾಗೂ ಹೊಸ ಕಾಮಗಾರಿಗಳ ಪರಿಶೀಲನೆ, ತರಕಾರಿ ಸಂಗ್ರಹಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಎಸ್.ನಾಗೇಂದ್ರ, ಧನಂಜಯ್, ಎ.ಎನ್.ನಾಗರಾಜು, ಎನ್.ನಾಗರಾಜು, ಜಯರಾಂ ಇತರರಿದ್ದರು.