raichur 
ಜಿಲ್ಲೆ

ಹಾಪ್‌ಕಾಮ್ಸ್ ಸಂಘದ ವಾರ್ಷಿಕ ಸಭೆ ಪೂರ್ಣ

Raichur - Reporter - Rachhai Swamy

ರಾಯಚೂರು ನಗರದ ಜಿಲ್ಲಾತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಘಟಕದ (ಹಾಪ್‌ಕಾಮ್ಸ್) ಕಚೇರಿಯಲ್ಲಿ 2024-25ನೇ ಸಾಲಿನ 26ನೇ ವಾರ್ಷಿಕ ಮಹಾಸಭೆ ಇಚೇಗೆ ನಡೆಯಿತು.

ಸಂಘದ ಅಧ್ಯಕ್ಷ ನಾಗನಗೌಡ ಮಾತನಾಡಿ, ರೈತರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ಹಾಗೂ ರೈತರಿಗೆ ಕೈ ತಲುಪುವ ಬೆಲೆ ಮುಟ್ಟಿಸುವ ಉದ್ದೇಶವನ್ನು ಜಿಲ್ಲಾ ಹಾಪ್ ಕಾಮ್ಸ್ ಸಂಘ ಹೊಂದಿದೆಂದು ತಿಳಿಸಿದರು. ನಂತರ ವ್ಯವಸ್ಥಾಪಕ ನಿರ್ದೇಶಕ ನಿಯಾಜ್ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ನಡುವಳಿಗಳನ್ನು ಹಾಗೂ 2024-25 ನೇ ಸಾಲಿನ ಸಂಘದ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು.

ಸಂಘದ 2025-26 ಸಾಲಿನ ಮುಂಗಡ ಅಯ-ವ್ಯಯ ಮಂಡನೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರತಾಪ ರೆಡ್ಡಿ, ಆಡಳಿತ ಮಂಡಳಿ ನಿರ್ದೇಶಕರಾದ ವಿಶ್ವನಾಥರೆಡ್ಡಿ, ಶಂಕರ ರೆಡ್ಡಿ, ಪಂಪನಗೌಡ, ಲಚ್ಚಪ್ಪನಾಯಕ, ಸೂರ್ಯಪ್ರಕಾಶ ಸೇರಿ ಅನೇಕರು ಇದ್ದರು.