ಜಿಲ್ಲೆ

ರಾಮಗಿರಿ ವಿದ್ಯಾರ್ಥಿನಿ ಸಾಧನೆ

Chitradurga

ಹೊಳಲ್ಕೆರೆ: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಾಲೂಕಿನ ರಾಮಗಿರಿ ಗ್ರಾಮದ ನಿವಾಸಿ ಎಸ್.ಪಿ.ಪೂಜಾ ಹೆಸರು ದಾಖಲಾಗಿದೆ.

ಮಂಡ್ಯ ಬಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಎಸ್.ಪಿ.ಪೂಜಾ, ಕೃಷಿ ವಿಜ್ಞಾನಿ ಡಾ.ಎಸ್.ಎಸ್.ಪ್ರಕಾಶ್ ಮಾರ್ಗದರ್ಶನದಲ್ಲಿ ರಾಕ್ ಡಸ್ಟ್‌ನ ಪೋಷಕಾಂಶಗಳು ಮತ್ತು ಕೃಷಿಯಲ್ಲಿ ಅದರ ಬಳಕೆ ಎಂಬ ವಿಷಯದ ಬಗ್ಗೆ ಸಂಶೋಧನೆ ಪ್ರಬಂಧ ಮಂಡಿಸಿದ್ದಾರೆ.

ಇದು ದೇಶದಲ್ಲೇ ಮೊದಲ ಬಾರಿಗೆ ಮಂಡಿಸಿರುವ ವಿಷಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೂಜಾ ಅವರು ಸದ್ಯ ಕೃಷಿ ವಿವಿ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕ ಗಳಿಸಿದ್ದಾರೆ.