ಹನುಮಸಾಗರ ಸಮೀಪದ ಹೂಲಗೇರಾದಲ್ಲಿ ಸಮ್ಮೇಳನ ಅಧ್ಯಕ್ಷರ ಹಾಗೂ ತಾಯಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಸಿದ್ಧಗೊಳುತ್ತಿರುವ ಎತ್ತಿನ ಗಾಡಿಗಳು.  
ಜಿಲ್ಲೆ

ನುಡಿ ಜಾತ್ರೆ ಸಾಂಗವಾಗಿ ನಡೆಯಲಿ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಪಿಎಸ್‌ಐ ಧನಂಜಯ ಹಿರೇಮಠ ಆಯೋಜಕರಿಗೆ ಸೂಚಿಸಿದರು.

ಸಮೀಪದ ಹೂಲಗೇರಾ ಗ್ರಾಮದ ಎಂ.ಆರ್. ಪಾಟೀಲ್ ಮೈದಾನದಲ್ಲಿ ಸಿದ್ಧಗೊಳುತ್ತಿರುವ ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಪರಿಶೀಲಿಸಿ ಗುರುವಾರ ಮಾತನಾಡಿದರು.

ಸಮ್ಮೇಳನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಗಲಾಟೆ, ಗದ್ದಲ ಮಾಡಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪೇದೆ ಸಿದ್ದು ನವಲಿ, ಕಸಾಪ ಕೇಂದ್ರದ ಪ್ರತಿನಿಧಿ ನಬಿಸಾಬ ಕುಷ್ಟಗಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಹಗೀರದಾರ, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ, ಮುಖಂಡ ಎಂ.ಆರ್. ಪಾಟೀಲ ಇತರರಿದ್ದರು.

ಎತ್ತಿನ ಗಾಡಿಗಳಿಗೆ ಅಲಂಕಾರ: ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ನಾಡದೇವಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ 13 ಎತ್ತಿನ ಗಾಡಿಗಳ ಶೃಂಗಾರ ಕಾರ್ಯ ಭರದಿಂದ ಸಾಗಿದ್ದು, ಬಂಡಿಗಳಿಗೆ ನಾಡ ಧ್ವಜದ ಬಣ್ಣ ಹಚ್ಚಿ ಸಿಂಗರಿಸಲಾಗುತ್ತಿದೆ.