ಹೊನವಾಡ ಗ್ರಾಮದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಾಸಿಂಪೀರ ವಾಲಿಕಾರ ಉದ್ಘಾಟಿಸಿದರು. ಬಾಬುರಾವ ಮಹಾರಾಜರು, ಪ್ರೊ. ಎಂ.ಎಸ್​. ಖೋದ್ನಾಪೂರ, ಡಿ.ಬಿ. ಡೇಮ್ರಿ ಇದ್ದಾರೆ.  
ಜಿಲ್ಲೆ

ಸಾಧಕರಿಂದ ಪ್ರಗತಿ ಹೊಂದಿದ ಹೊನವಾಡ ಗ್ರಾಮ

ಗಿರೀಶ ಸಗರ

ವಿಜಯಪುರ: ಬಸವಂತರಾಯ ಮಹಾರಾಜರು ಮತ್ತು ಬಸವರಾಜ ಮೇಲುಪ್ಪರಗಿಮಠ ಅವರು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಶಿಕ್ಷಣಕ್ಕಾಗಿ ದುಡಿದು ತಮ್ಮ ಜೀವನ ಸಾರ್ಥಕ ಮಾಡಿಕೊಂಡ ಮಹಾನ ಸಾಧಕರು ಎಂದು ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜ ಆಶೀರ್ವಚನ ನೀಡಿದರು.

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ವಿಠ್ಠಲ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡ ಲಿಂ. ಬಸವಂತರಾಯ ಮಹಾರಾಜರ ಹಾಗೂ ಲಿಂ. ಬಸವರಾಜ ಮೇಲುಪ್ಪರಗಿಮಠ ದತ್ತಿನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೊನವಾಡ ಗ್ರಾಮ ಇಬ್ಬರು ಸಾಧಕರಿಂದ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ಪ್ರಗತಿ ಹೊಂದಲು ಸಾಧ್ಯವಾಯಿತು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸಮಾರಂಭ ಉದ್ಘಾಟಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದ್ದು, ಕನ್ನಡ ನಾಡು&ನುಡಿಯು ಅತ್ಯಂತ ಶ್ರೀಮಂತವಾಗಿದೆ. ಸಾಹಿತ್ಯದಿಂದ ಸಾಮಾಜಿಕ ಮೌಲ್ಯ ರಕ್ಷಿಸಲು ಸಾಧ್ಯ. ದತ್ತಿ ನಿಧಿ ಕಾರ್ಯಕ್ರಮದ ಮೂಲಕ ವಚನ ಮತ್ತು ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಉಪನ್ಯಾಸಕ ಡಿ.ಬಿ. ಡೇಮ್ರಿ ಅವರು ಬಸವಂತರಾಯ ಮಹಾರಾಜರ ಕುರಿತು ಉಪನ್ಯಾಸ ನೀಡಿ, ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯ ನೀಡಿ ಹೊನವಾಡದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಸ್ಥಾಪಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು ಎಂದರು.

ಪ್ರೊ. ಎಂ.ಎಸ್​. ಖೋದ್ನಾಪೂರ ಅವರು ಬಸವರಾಜ ಮೇಲುಪ್ಪರಗಿಮಠ ಕುರಿತು ಉಪನ್ಯಾಸ ನೀಡಿ, ಬಸವರಾಜ ಮೇಲುಪ್ಪರಗಿಮಠ ಕನ್ನಡ ಸಾಹಿತ್ಯಕ ಚಟುವಟಿಕೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿದವರು ಎಂದರು.

ವಿಜಯಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಬಿಜ್ಜರಗಿ ಗ್ರಾಪಂ ಅಧ್ಯಕ್ಷ ಸುಭಾಷಗೌಡ ಮತ್ತು ತಿಕೋಟಾ ತಾಲೂಕ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳನ್ನು ಸನ್ಮಾನಿಸಲಾಯಿತು. ಡಾ. ಸಿದ್ದಲಿಂಗಪ್ಪ ಸಾರವಾಡ, ಅವಿನಾಶ ಮೇಲುಪ್ಪರಗಿಮಠ, ಮಹಾದೇವ ಜಾಧವ, ಸಾಬು ಕಾತ್ರಾಳ, ಧರೆಪ್ಪ ಯಚ್ಚಿ ಮತ್ತು ಸಿದ್ದು ಬೆಳಗಾವಿ ವೇದಿಕೆಯಲ್ಲಿದ್ದರು.

ಆನಂದ ಹೊನವಾಡ ಪ್ರಾರ್ಥಿಸಿದರು. ಶರಣಮ್ಮ ಹಾದಿಮನಿ ಸ್ವಾಗತಿಸಿದರು. ಲಕ್ಷಿ$್ಮ ಕಾತ್ರಾಳ ಕವನ ವಾಚಿಸಿದರು. ಹಣಮಂತ ಮೋಹಿತೆ ವಂದಿಸಿದರು.

ಲಿಂಗರಾಜ ಪಾಟೀಲ, ಶರಣು ಕಂಠಿ, ಬಸವರಾಜ ನಾವಿ, ಮುರಿಗೆಪ್ಪ ಕೋಟಿ, ಧರೆಪ್ಪ ಚಾವರ, ಬಸವರಾಜ ಐಗಳಿಮಠ, ನಚಿಕೇತ ಹಿರೇಮಠ, ಶ್ರೀಶೈಲ ಮಾಲಗಾರ, ಸಚೀನ ಸಾವಂತ, ಶ್ರೀಕಾಂತ ಕಂಟೇಕಾರ, ಬಸು ಏಕನಾಟಿ, ಚಿದಾನಂದ ಅರಮೋಟಿ, ಉಮೇಶ ಮೂರಕಲಿ, ಚಿದಾನಂದ ಗೊರವರ, ಬಾಪು ದೇವನಾಯಕ, ಪುಟ್ಟು ಮಠಪತಿ, ಶಿವಾಜಿ ಜಾಧವ, ಆನಂದ ಕೊರಬು, ಅಕ್ಬರ ತಿಕೋಟಿ ಮತ್ತಿತರರಿದ್ದರು.