ಜಿಲ್ಲೆ

ವರ್ಷದ ಸಾಧಕ ಯುವ ಕ್ರಿಕೆಟಿಗರಿಗೆ ಸನ್ಮಾನ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್​ನ ವಾರ್ಷಿಕ ಕ್ರಿಕೆಟ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿವಿಧ ವಯೋವರ್ಗದಲ್ಲಿ ಉತ್ತಮ ಪ್ರದರ್ಶನ ನೀಡಿದ ವರ್ಷದ ಸಾಧಕ ಯುವ ಕ್ರಿಕೆಟಿಗರನ್ನು ಸನ್ಮಾನಿಸಲಾಯಿತು.

ನಿಶಾಂತ ಕುರುಬರ್, ಪ್ರೀತಂ ಗುಲಗಂಜಿ, ಯಶವಂತ ಕುಸುಮಣ್ಣವರ್, ಗಣೇಶ ಮಡ್ಡಿಮನಿ, ಪ್ರತ್ಯುಶ್ ಯಾದವ, ದೀಪಕ ನೀರಲಗಿ, ಸೌರವ ಸಮಂತ್, ಶತಕ ಗುಂಜಾಳ, ಅಕಾಶ ಕುಲಕರ್ಣಿ, ವಿರಾಜ ಹಾವೇರಿ, ಕೃಷ್ಣ ಬಗಾಡಿ, ಶುಭಂ ಉಮಾಜಿ, ಪ್ರಿಯರಂಜನ್ ಯಾದವ, ಅಬ್ದುಲ್ ಕರೀಂ ದಿವಾನಲಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಮಾನ್ಯತೆ ಗಳಿಸಿದ ಸ್ಪೇಷಲಿಸ್ಟ್ ಟ್ರೇನರ್ ಸಚಿನ ಘೊರ್ಪಡೆ ಅವರನ್ನು ಅಭಿನಂದಿಸಲಾಯಿತು.

ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ, ಸದಸ್ಯ ಉದಯ ಲೋಡಯಾ, ಟ್ರಸ್ಟಿಗಳಾದ ಪಂಕಜ ಮುನ್ವರ, ಶಿವಾನಂದ ಗುಂಜಾಳ ಇದ್ದರು. ವಿನಾಯಕ ಗುಡಿ ವಾರ್ಷಿಕ ವರದಿ ವಾಚಿಸಿದರು. ನಿಖಿಲ ಭೂಸದ ವಂದಿಸಿದರು.