ಜಿಲ್ಲೆ

ಕರಾಟೆ ಸಾಧಕಿಗೆ ಗ್ರಾಮ ಸಭೆಯಲ್ಲಿ ಸನ್ಮಾನ

ಎ. ಆರ್. ರಘುರಾಮ

 ನಾಪೋಕ್ಲು : ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಕರಾಟೆ ಸಾಧಕಿ, ಕುಮಿಟೆ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಬೇತು ಗ್ರಾಮದ ಶಝಾ ಫಾತಿಮಾ ಅವರನ್ನು ಗೌರವಿಸಲಾಯಿತು. ಶಾಸಕ ಡಾ. ಮಂತರ್ ಗೌಡ , ಗ್ರಾಪಂ ಅಧ್ಯಕ್ಷ ಎಚ್.ಎ. ಹಂಸ, ತಹಸೀಲ್ದಾರ್ ಪ್ರವೀಣ್ ಕುಮಾರ್, ಬಿಇಒ ದೊಡ್ಡೇಗೌಡ, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಪಾಟೀಲ್ ಇತರರು ಇದ್ದರು.