ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘದಿಂದ ವಿವಿಧ ಗ್ರಾಪಂ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನಿತಿನ್ ಕೆ.ವೆಂಕಟೇಶ್, ಸಿ.ಜೆ.ರವಿ, ಧನರಾಜ್, ಎಚ್.ಕೆ.ಜಯಸ್ವಾಮಿ, ಶಿವಣ್ಣ ಇದ್ದರು. 
ಜಿಲ್ಲೆ

ವಿವಿಧ ಗ್ರಾಪಂ ನೂತನ ಅಧ್ಯಕ್ಷರಿಗೆ ಸನ್ಮಾನ

ಬೈಲುಕುಪ್ಪೆ: ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘದಿಂದ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗೂರು ಗ್ರಾಮದ ಖಾಸಗಿ ಹೋಂ ಸ್ಟೇ ಆವರಣದಲ್ಲಿ ಸಂಘದ ವತಿಯಿಂದ ಸೋಮವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಂಗ್ರೆಸ್ ಬೆಂಬಲಿತ ಹಿಟ್ಟನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಗೂರ್ ವಿಜಯಕುಮಾರ್, ಕಿತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಮುತ್ತೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಅಕ್ಕಯಮ್ಮ, ಚಿಕ್ಕನೇರಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಮ್ಮ, ಕಮಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣ ತಮ್ಮಯ್ಯ, ಅವರನ್ನು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ಕೆ.ವೆಂಕಟೇಶ್ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ನಿತಿನ್ ಕೆ.ವೆಂಕಟೇಶ್, ತಾಲೂಕಿನ ಎಲ್ಲ ವರ್ಗದವರನ್ನು ಸಂವಿಧಾನಾತ್ಮಕವಾಗಿ ಜತೆಯಲ್ಲಿ ಕರೆದುಕೊಂಡು ಹೋಗುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ತಂದೆ ಕೆ.ವೆಂಕಟೇಶ್ ಸಚಿವ ಸ್ಥಾನ ಅಲಂಕರಿಸಿದ ನಂತರ ಅವರ ಕೆಲಸದ ಒತ್ತಡ ಹಿನ್ನೆಲೆಯಲ್ಲಿ ನಾನು ಕೆಲ ವರ್ಷಗಳಿಂದ ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಪಕ್ಷ. ನಂತರ ಎಲ್ಲ ವರ್ಗದವರ ಜನರನ್ನು ಜತೆಗೂಡಿ ಪಕ್ಷಭೇದ ಮರೆತು ಜನರ ಸೇವೆ ಮಾಡಬೇಕೆಂಬುದೆ ನನ್ನ ಹಂಬಲ ಎಂದರು.

ಹಿಟ್ಟನೆ ಹೆಬ್ಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಗೂರು ವಿಜಯಕುಮಾರ್ ಮಾತನಾಡಿ, ನಾನು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸಚಿವರು ಕರೆತಂದು ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿಸಿದರು. ನನಗೆ ಸಿಕ್ಕ ಅಧಿಕಾರವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಬಡವರ ಕೆಲಸ-ಕಾರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕು ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜೆ. ರವಿ, ಕಾಂಗ್ರೆಸ್ ಮುಖಂಡ ರಾಧಾ ಧನರಾಜ್, ಲಕ್ಷ್ಮೀನಾರಾಯಣ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡ ಶೇಕ್ ಅಸ್ಲಾಂ, ಸಂಘದ ಖಜಾಂಚಿ ಎಚ್.ಕೆ.ಜಯಸ್ವಾಮಿ, ಗೌರವಾಧ್ಯಕ್ಷ ಭೂತನಹಳ್ಳಿ ಶಿವಣ್ಣ, ಮಾಜಿ ಅಧ್ಯಕ್ಷ ಗಿರಗೂರ ಸಣ್ಣಪ್ಪ, ಪದಾಧಿಕಾರಿಗಳಾದ ಚಂದ್ರು, ನಾರಾಯಣ, ಮಂಜು, ರಮೇಶ, ಚನ್ನಪ್ಪ, ದೇವಯ್ಯ, ಚೆನ್ನಯ್ಯ ಸೇರಿದಂತೆ ಮತ್ತಿತರರು ಇದ್ದರು.