ಸಿರಗುಪ್ಪ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಗಾಂಧಿವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷೆ ತುಳಸಿ ಮಾತನಾಡಿ, ಮನೆ ಮನೆ ಸಮೀಕ್ಷೆ ಸೇರಿ ಕರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಯಾವುದೇ ಸುರಕ್ಷತಾ ಸಾಮಗ್ರಿ ವಿತರಿಸಿಲ್ಲ. ಹೀಗಾಗಿ ಕೆಲಸ ನಿರ್ವಹಿಸಲು ಅನನುಕೂಲವಾಗಿದೆ. ಅಲ್ಲದೆ ಗೌರವಧನ 12ಸಾವಿರ ರೂ.ಗೆ ಹೆಚ್ಚಿಸುವಂತೆ ಹಲವು ಸಲ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದೇವೆಂದು ತಿಳಿಸಿದರು. ಪದಾಧಿಕಾರಿಗಳಾದ ಉಮಾದೇವಿ, ಗೋವಿಂದಮ್ಮ, ಭಾಗ್ಯಮ, ಚಂದ್ರಕಲಾ, ಭಾರತಿ, ಭೀಮವ್ವ, ದೇವಿ, ಅಂಬಮ್ಮ, ಬಸಮ್ಮ, ಚಾಮುಂಡಿ ಇತರರಿದ್ದರು.