ಜಿಲ್ಲೆ

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾ ಶೆಟ್ಟನಗೌಡ್ರ

ಯಮಕನಮರಡಿ: ಈಚೆಗೆ ಹುಕ್ಕೇರಿಯಲ್ಲಿ ಜರುಗಿದ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಎಸ್‌ಆರ್‌ಎಂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ತಾಲೂಕು ಮಟ್ಟದ ಕ್ರೀಡೆಯಲ್ಲಿ ೧೦೦ ಮೀ. ಓಟದಲ್ಲಿ ಕೌಶಲ್ಯಾ ನಾಯಿಕ ಪ್ರಥಮ, ೨೦೦ ಮೀ. ಓಟದಲ್ಲಿ ಕೋಮಲ ನಾಯ್ಕ ಪ್ರಥಮ ಹಾಗೂ ಶ್ರೀದೇವಿ ನಾಯ್ಕ ದ್ವಿತೀಯ, ೩೦೦೦ ಮೀ. ಓಟದಲ್ಲಿ ಸಾನಿಕಾ ನಾಯ್ಕ ದ್ವಿತೀಯ, ೩೦೦೦ ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಪ್ರಧಾನ ಪ್ರಥಮ, ಐಚ್ಛಿಕ ಯೋಗ ಸ್ಪರ್ಧೆಯಲ್ಲಿ ಭರಮಾ ಪಾಟೀಲ ಪ್ರಥಮ ಹಾಗೂ ರಿಲೇ ಓಟದಲ್ಲಿ ಸಾನಿಕಾ ನಾಯ್ಕ, ಕೌಶಲ್ಯಾ ನಾಯಿಕ,

ಶ್ರೀದೇವಿ ನಾಯ್ಕ ಹಾಗೂ ಲಕ್ಷ್ಮಿ ಪಾಟೀಲ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರಣ್ಣ ಬಿಸಿರೊಟ್ಟಿ, ಸದಸ್ಯ ಸಿದ್ದಪ್ಪ ಶಿಳ್ಳಿ, ಅಸ್ಲಂ ಪಕಾಲಿ, ಈಶ್ವರ ಮಾರ್ಯಾಳಿ, ಪ್ರಾಚಾರ್ಯ ಎಸ್.ಎ ರಾಮನಕಟ್ಟಿ , ಎಸ್.ಆರ್. ತಬರಿ, ಬಿ.ಬಿ.ಕೊಡ್ಲಿ ಇತರರಿದ್ದರು.