ಮೈಸೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಹೊಯ್ಸಳ ಟ್ರಸ್ಟ್‌ನಿಂದ ಹಿರಿಯ ಮೂರ್ತಿ ತಯಾರಕರನ್ನು ಸನ್ಮಾನಿಸಲಾಯಿತು. ನಗರದ ಕುಂಬಾರಗೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಶಿಲ್ಪ ಕಲಾ ಕುಟೀರದ ಡಿ. ರೇವಣ್ಣ, ನಿಂಗಮ್ಮ, ಎವರ್ ಗ್ರೀನ್ ಮಾಡಲ್ ವರ್ಕ್ಸ್‌ನ ಎಸ್. ರಾಘವೇಂದ್ರ, ವಿದ್ಯಾ ಗಣಪತಿ ಕಲಾ ನಿಲಯದ ಯಶವಂತ್ ಅವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಮಾತನಾಡಿ, ಪಾರಂಪರಿಕ ಶೈಲಿಯಲ್ಲಿ ನೈಸರ್ಗಿಕ ಮಣ್ಣಿನ ಶಿಲ್ಪ ಮೂರ್ತಿ ತಯಾರಕರ ಕಲೆ ಉಳಿಯಬೇಕಿದೆ. ಹಾಗಾಗಿ ದೇಶಾದ್ಯಂತ ಮಣ್ಣಿನ ಗಣಪತಿ ತಯಾರಕರು ಕಲಾಕೃತಿ ಕಲಾವಿದರ ಕಲೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಗಣಪತಿ ತಯಾರಕರ ಪ್ರಾಧಿಕಾರ ಸ್ಥಾಪನೆ ರಚಿಸಲು ಮುಂದಾಗಬೇಕು ಎಂದರು.
ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಳನಿ, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್, ಸಂಘಟಕರಾದ ಜಿ. ರಾಘವೇಂದ್ರ, ಅಜಯ್ ಶಾಸ್ತ್ರಿ, ಮುಖಂಡರಾದ ವರುಣ ಮಹಾದೇವ್, ಕಡಕೊಳ ಶಿವಲಿಂಗ, ಲೋಕೇಶ, ಸೈಯದ್, ಕಿರಣ್, ದುರ್ಗಾ ಪ್ರಸಾದ್ ಇತರರು ಇದ್ದರು.