ಎನ್.ಆರ್.ಪುರ: ತಾಲೂಕಿನಲ್ಲಿ ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಎಲೆ ಮರೆ ಕಾಯಿಯಂತಿದ್ದು,ಅಂತಹ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲಾಗುವುದು ಎಂದು ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ತಿಳಿಸಿದರು.
ಪಟ್ಟಣದಲ್ಲಿ ನಡೆದ ಜೇಸಿ ಸಂಸ್ಥೆ ಕಾರ್ಯಕಾರಿಣಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಜೇಸಿ ಸಂಸ್ಥೆ ಸದಸ್ಯರ ಮಕ್ಕಳಲ್ಲಿ ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ಜೇಸಿ ಸಂಸ್ಥೆ ಕಾರ್ಯದರ್ಶಿ ವಿನುತ್, ಸಹ ಕಾರ್ಯದರ್ಶಿ ಪವನ್‌ಕರ್, ಉಪಾಧ್ಯಕ್ಷ ಜಿ.ಪುರುಷೋತ್ತಮ್, ವಲಯ ಅಧಿಕಾರಿ ಚರಣ್‌ರಾಜ್, ಪೂರ್ವಾಧ್ಯಕ್ಷರಾದ ವಿದ್ಯಾನಂದ, ಯ ಕೆ.ಗಂಗಾಧರ್, ಮಂಜು.ಎನ್.ಗೌಡ, ನಿರ್ದೇಶಕ ಪಿ.ಐ.ಎಲ್ದೋ ಇದ್ದರು.