ಹೆಬ್ರಿ: ಸರ್ಕಾರಿ ನೌಕರರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿದಾಗ ಅಪಾರ ಗೌರವ ಸಿಗುತ್ತದೆ. ಈ ರೀತಿಯ ಸೇವೆ ಮತ್ತಷ್ಟು ಜನರಿಗೆ ಸಿಗಬೇಕು ಎಂದು ಶಾಸಕ ಸುನೀಲ್‌ಕುಮಾರ್ ಹೇಳಿದರು.
ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪದ ಸಂದರ್ಭ ಸ್ಪಂದಿಸಿದ ಮುದ್ರಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸಹಿತ ವಿವಿಧ ಅಧಿಕಾರಿಗಳಿಗೆ ಬುಧವಾರ ಮುದ್ರಾಡಿಯಲ್ಲಿ ಸಾರ್ವಜನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂದಾಯ ನಿರೀಕ್ಷಕ ಹಿತೇಶ್, ಗ್ರಾಮ ಆಡಳಿತ ಅಧಿಕಾರಿ ನವಿನ್‌ಕುಮಾರ್, ಗಣೇಶ್ ಕುಲಾಲ್, ಪೊಲೀಸ್ ಸಿಬ್ಬಂದಿ ದಯಾಕರ್ ಪ್ರಸಾದ್, ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಉಪಾಧ್ಯಕ್ಷೆ ರಮ್ಯಕಾಂತಿ, ಪಿಡಿಒ ಅಮೃತಾ ಕುಲಾಲ್ ಸನ್ಮಾನ ಸ್ವೀಕರಿದರು.
ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ್ ಬಂಗೇರ, ಮಾಜಿ ಸದಸ್ಯ ಉದಯ್ ಗೌಡ, ಗಣಪತಿ ಮುದ್ರಾಡಿ ಗ್ರಾಮಸ್ಥರು ಇದ್ದರು. ರಮ್ಯಕಾಂತಿ ಸ್ವಾಗತಿಸಿದರು. ಗಣಪತಿ ವಂದಿಸಿದರು. ಶಾಂತ ದಿನೇಶ್ ಪೂಜಾರಿ ನಿರೂಪಿಸಿದರು.