ಜಿಲ್ಲೆ

ದೈವ ಸ್ವರೂಪಿ ಶಿಕ್ಷಕರನ್ನು ಸನ್ಮಾನಿಸುವುದು ಶ್ಲಾಘನೀಯ

ಮರಿದೇವ ಹೂಗಾರ

ಹುಬ್ಬಳ್ಳಿ: ಶಿಕ್ಷಕ ಸನ್ಮಾನ ಸಮಿತಿ ವತಿಯಿಂದ ನಿವೃತ್ತ ಶಿಕ್ಷಕರ ಹಾಗೂ ವಿಶೇಷ ಸಾಧನೆ ಮಾಡಿದ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಇಲ್ಲಿಯ ಮಲ್ಲಿಕಾರ್ಜುನ ಗಚ್ಚಿನ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಏರ್ಪಾಟಾಗಿತ್ತು.

ನಿವೃತ್ತ ಡಿಡಿಪಿಐ ಆರ್.ಸಿ. ಹಲಗತ್ತಿ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸುತ್ತಾರೆ. ಇಂಥವರನ್ನು ಗುರುತಿಸಿ ಸನ್ಮಾನಿಸುವುದಕ್ಕಾಗಿಯೇ ಸ್ಥಾಪನೆಯಾಗಿರುವ ಏಕೈಕ ಸಂಸ್ಥೆ. ಶಿಕ್ಷಕರು ದೈವ ಸ್ವರೂಪಿ. ಅವರನ್ನು ಸನ್ಮಾನಿಸಿದರೆ ದೇವರಿಗೆ ಪೂಜೆ ಸಲ್ಲಿಸಿದಂತೆ ಎಂದರು.

ಗಣ್ಯ ವ್ಯಾಪಾರಸ್ಥ ಜಿ.ಎಂ. ಚಿಕ್ಕಮಠ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಅವರ 98ನೇ ಜನ್ಮ ದಿನವನ್ನು ಆಚರಿಸಲಾಯಿತು.

ಎಚ್.ಎಸ್. ರೂಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಎಸ್.ಬಿ. ಪಾಟೀಲ, ಎಚ್.ಎಲ್. ತುಪ್ಪದ, ಎಲ್.ಸಿ. ಹೊಸಮನಿ, ಸುಧಾ ಶೀಲವಂತರ ಇತರರು ಇದ್ದರು.