ಜಿಲ್ಲೆ

ಸಹೋದರತ್ವ, ಪ್ರೀತಿ ವಿಶ್ವಾಸದಿಂದ ಶ್ರೇಷ್ಠ ಸ್ಥಾನ

ಇಂದಿರಾ ಎನ್ ಕೆ

ಬೈಂದೂರು: ಪ್ರತಿಯೊಂದು ಕಾರ್ಯಗಳಲ್ಲಿ ಸಹೋದರತ್ವ, ಪ್ರೀತಿ ವಿಶ್ವಾಸದಿಂದ ಇದ್ದರೆ ಶ್ರೇಷ್ಠ ಸ್ಥಾನ ತಲುಪಲು ಸಾಧ್ಯ ಎಂದು ಶಿರೂರು ಕರಾವಳಿ ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್ ಹೇಳಿದರು.

ಕರಾವಳಿ ಯುವಶಕ್ತಿ ವೇದಿಕೆಯಲ್ಲಿ ಕರಾವಳಿ ಯುವಶಕ್ತಿ ಉತ್ಸವ ಸಮಿತಿ, ನವೋದಯ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ತ್ರಿಶಕ್ತಿ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಗ್ರಾಮದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ, ನಿವೃತ್ತ ಶಿಕ್ಷಕ ಹೆರಿಯಣ್ಣ ಮಾಸ್ಟರ್, ನಾಯ್ಕನಕಟ್ಟೆ ಶಾಲಾ ಮುಖ್ಯಶಿಕ್ಷಕ ಮಹಾದೇವ ಬಿಲ್ಲವ, ತಿಮ್ಮಪ್ಪ ಬಿಲ್ಲವ ದೇವರಹಿತ್ಲು, ಉದ್ಯಮಿ ಚಿಕ್ಕಯ್ಯ ಬಿಲ್ಲವ ತೆಂಕಮನೆ, ಧ.ಗ್ರಾ.ಯೋಜನೆ ವಿನಾಯಕ, ಚೆಣ್ಣಮ್ಮ ಕರಾವಳಿ ಇದ್ದರು.

ಬೈಂದೂರು ವಲಯ ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಬಿ.ಪಿ. ಪ್ರಾರ್ಥಿಸಿ, ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಸಿದರು. ಯುವಶಕ್ತಿ ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಮೇಸ್ತ ವಂದಿಸಿದರು.

ಸನ್ಮಾನ

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕರಾಗಿ ಆಯ್ಕೆಯಾದ ಚಿಕ್ಕು ಪೂಜಾರಿ, ಅರುಣ್‌ಕುಮಾರ್ ಶಿರೂರು ಹಾಗೂ ವಯೋ ನಿವೃತ್ತರಾದ ಶಿಕ್ಷಕ ಮಾಧವ ಬಿಲ್ಲವ ಕಾಳನಮನೆ ಅವರನ್ನು ಸನ್ಮಾನಿಸಲಾಯಿತು.