ಹುಣಸೂರು: ಜಿಲ್ಲಾ ವಕ್ಫ್ ಬೋರ್ಡ್‌ನ ನಿರ್ದೇಶಕರಾಗಿ ಅಜೀಜುಲ್ಲಾ(ಅಜ್ಜು) ಹಾಗೂ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವ ತಾಲೂಕಿನ ರತ್ನಪುರಿ ಗ್ರಾಮದ ನಿವಾಸಿ ಅಜ್ಗರ್ ಪಾಷಾ ಅವರನ್ನು ಶಬ್ಬೀರ್ ನಗರದ ಶಾಹಿ ಮಸೀದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಅಜೀಜುಲ್ಲಾ, ಈಗಾಗಲೇ ಶಾಹಿ ಮಸೀದಿ ಸಮಿತಿ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 75 ಲಕ್ಷ ರೂ. ಅನುದಾನದ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ರಾಜ್ಯ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಶಾಹಿ ಮಸೀದಿ ಅಧ್ಯಕ್ಷ ಎಚ್.ಎಂ. ಫಜಲುಲ್ಲಾ, ಉಪಾಧ್ಯಕ್ಷ ಮುನ್‌ತಾಜ್‌ಅಹಮದ್, ಕಾರ್ಯದರ್ಶಿ ಎಂ.ಎಂ.ವಜಿರ್ ಅಹಮದ್, ಖಜಾಂಚಿ ನಾಸೀರ್, ಪಾಷ, ಸಿರಾಜ್, ಅಜೀಮುಲ್ಲಾ, ಖಾಲೀದ್ ಪಾಷ, ರಿಜ್ವಾನ್, ಖಲೀಲ್ ಅಹಮದ್ ಇತರರು ಇದ್ದರು.