ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ತಾವರೆಕೆರೆಯಲ್ಲಿ ಆಯೋಜಿಸಿದ್ದ ಶ್ರೀದ್ರೌಪದಿ ಧರ್ಮರಾಯ ಸ್ವಾಮಿಯವರ 74ನೇ ಕರಗ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಕರಗದ ಕಾರ್ಯಕರ್ತರಿಗೆ ವೀರ ವಸ ನೀಡಿ ಗೌರವಿಸಲಾಯಿತು.
ವಿಶ್ವ ಪಾಂಡವರ ಸೇನೆಯ ರಾಜ್ಯಾಧ್ಯರೂ ಆದ ರಾಜ್ಯ ವಹ್ನಿ ಕುಲ ತ್ರಿಯರ ಶ್ರೀಕರಗ ಮಹಾ ಶಕ್ತಿ ಸೇವಾ ವೇದಿಕೆ ಸಂಸ್ಥಾಪಕ, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ದೇವಾರ್ಜುನ ಮಾತನಾಡಿ, 74ನೇ ಕರಗ ಮಹೋತ್ಸವವು ಸಂಪನ್ನಗೊಂಡಿದೆ. ತಾವರೆಕೆರೆ ಮುತ್ತಪ್ಪ, ಪೆರುಮಳಪ್ಪ, ಮುನಿವೆಂಕಟಪ್ಪ, ಮುನಿಯಪ್ಪ, ರಾಜಗೋಪಾಲ, ವೆಂಕಟೇಶ್, ಮುನಿರಾಜು ದೈವ ಕರಗ ಹೊತ್ತು ಗ್ರಾಮದ ಧಾರ್ಮಿಕ ಕಾರ್ಯನಡೆಸಿಕೊಟ್ಟಿದ್ದರೆ, ಲ್ಮ ನಾರಾಯಣ ಅವರು ಕರಗ ಹೊತ್ತು ಸೇವೆ ಸಲ್ಲಿಸಿದ್ದಾರೆ ಎಂದರು.
ಮುಖಂಡರಾದ ಮೀಸೆ ಮುನಿರಾಮ್, ತಾವರೆಕೆರೆಯ ನಾಗೇಶ್, ಮಣಿಶಂಕರ್, ಗಣಾಚಾರಿ ಮುನಿರಾಜು ಉಪಸ್ಥಿತರಿದ್ದರು.