ಜಿಲ್ಲೆ

ಬ್ರಹ್ಮಾವರ ಸಂಘದಿಂದ ಸನ್ಮಾನ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಬ್ರಹ್ಮಾವರ ಹಾಲು ಉತ್ಪಾದಕರ ನೌಕರರ ಸಂಘದ ವತಿಯಿಂದ ನಿವೃತ್ತ ಸಿಬ್ಬಂದಿ ಜಯಶೀಲಾ ಶೆಟ್ಟಿ, ಜಲಂಧರ ಶೆಟ್ಟಿ, ವಿಷ್ಣುದಾಸ್ ಶೆಟ್ಟಿಗಾರ್ ಮುಡ್ಕಿನ್‌ಜೆಡ್ಡು, ರಾಜು ಟಿ.ಕುಂದರ್ ಕೋಡಿ ಕನ್ಯಾಣ ಅವರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಗಾಂಧಿಭವನದಲ್ಲಿ ನಡೆಯಿತು.

ಬ್ರಹ್ಮಾವರ ಹಾಲು ಉತ್ಪಾದಕರ ನೌಕರರ ಸಂಘ ಅಧ್ಯಕ್ಷ ರಾಕೇಶ್ ನಾಯಕ್ ಎತ್ತಿನಟ್ಟಿ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿವೃತ್ತ ಉಪವ್ಯವಸ್ಥಾಪಕ ಡಾ.ಅನಿಲ್‌ಕುಮಾರ್ ಶೆಟ್ಟಿ, ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಮೆಕ್ಕೆಕಟ್ಟು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆಎಂಎಫ್ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ನಿರ್ದೇಶಕ ರವಿರಾಜ್ ಹೆಗ್ಡೆ ಕೊಡವೂರು, ಮಾಜಿ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಚೇರ್ಕಾಡಿ, ಶಿರಿಯಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಒಕ್ಕೂಟದ ಮ್ಯಾನೇಜರ್ ರವಿರಾಜ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.