ವಂ.ಡಾ. ಪ್ರವೀಣ್ ಮಾರ್ಟಿಸ್ ಅವರಿಗೆ ಡಿಡಿಜಿ, ಏರ್ ಕಮೋಡೋರ್ ಕಮಲ್ ಚಾಧಾ ಅವರು ಕರ್ನಲ್ ಕಮಾಂಡೆಂಟ್ ಅವರಿಗೆ ಗೌರವ ಪ್ರದಾನ ಮಾಡಿದರು. 
ಜಿಲ್ಲೆ

ವಂ.ಡಾ. ಪ್ರವೀಣ್ ಮಾರ್ಟಿಸ್ ಅವರಿಗೆ ಕರ್ನಲ್ ಕಮಾಂಡೆಂಟ್ ಗೌರವ ಪ್ರದಾನ

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ, ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರಿಗೆ ಭಾರತ ಸರ್ಕಾರವು ಅಧಿಕೃತವಾಗಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನಲ್ಲಿ ಗೌರವ ಕರ್ನಲ್ ಹುದ್ದೆ ಮತ್ತು ’ಕರ್ನಲ್ ಕಮಾಂಡೆಂಟ್’ ಆಗಿ ನೇಮಕ ಮಾಡಿದ್ದು, ಈ ವಿಶಿಷ್ಟ ರಾಷ್ಟ್ರೀಯ ಮನ್ನಣೆಯನ್ನು ಗುರುವಾರ ವಿಶ್ವವಿದ್ಯಾಲಯದ ಹಾಲ್‌ನಲ್ಲಿ ಪ್ರದಾನ ಮಾಡಲಾಯಿತು.
ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಡಿಡಿಜಿ, ಏರ್ ಕಮೋಡೋರ್ ಕಮಲ್ ಚಾಧಾ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಏರ್ ಕಮೋಡೋರ್ ಕಮಲ್ ಚಡ್ಡಾ, ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಸಿಸಿ ಶಿಸ್ತುಬದ್ಧ, ಆತ್ಮವಿಶ್ವಾಸ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸುತ್ತದೆ. ಎನ್‌ಸಿಸಿ ತರಬೇತಿಯು ಯುವಜನರಲ್ಲಿ ನಾಯಕತ್ವ, ಧೈರ್ಯ, ತಂಡದ ಕೆಲಸ ಮತ್ತು ರಾಷ್ಟ್ರದ ಕಡೆಗೆ ಬಲವಾದ ಕರ್ತವ್ಯ ಪ್ರಜ್ಞೆಯನ್ನು ಸಜ್ಜುಗೊಳಿಸುತ್ತದೆ ಎಂದರು.
ಮಂಗಳೂರು ಎನ್‌ಸಿಸಿ ಗ್ರೂಪ್ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಟ್ಟು 239 ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 15,700 ಕ್ಕೂ ಹೆಚ್ಚು ಕೆಡೆಟ್‌ಗಳನ್ನು ಹೊಂದಿದೆ .
ಈ ಪ್ರದೇಶದ ಯುವಕರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸುವಲ್ಲಿ ಎನ್‌ಸಿಸಿ ಮುಂದುವರಿದಿದ್ದು, ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಎನ್‌ಸಿಸಿಯನ್ನು ತಮ್ಮ ಪಠ್ಯಕ್ರಮದ ಭಾಗವಾಗಿ ಸೇರಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿವೆ. ನಾಯಕತ್ವ, ಸಮುದಾಯ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿರುವ ಶಿಸ್ತುಬದ್ಧ, ಜವಾಬ್ದಾರಿಯುತ ಮತ್ತು ದೇಶಭಕ್ತ ಯುವಕರನ್ನು ಪೋಷಿಸುವಲ್ಲಿ ಎನ್‌ಸಿಸಿಯ ಸಹಯೋಗವು ಪ್ರಮುಖ ಪಾತ್ರ ವಹಿಸುತ್ತದೆ.
ಎನ್‌ಸಿಸಿ ಮಂಗಳೂರು ಗ್ರೂಪ್‌ನ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಮತ್ತು 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಂಗಳೂರು ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಆರ್. ಪಿ. ರೈ ಅವರ ನಾಯಕತ್ವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.