ಕುಂದಾಪುರ: ಶಿಕ್ಷಕ ವೃತ್ತಿಯೇ ಶ್ರೇಷ್ಠವಾದದ್ದು. ಅದರಲ್ಲೂ ವಿಶೇಷ ಚೇತನರಾಗಿದ್ದು ಶಿಕ್ಷಕರಾಗಿ ಕಾರ್ಯನಿರ್ವಹಿಸುವುದು ವ್ಯಕ್ತಿಗಿರುವ ಬದ್ಧತೆ ಹಾಗೂ ಕಳಕಳಿಯನ್ನು ತೋರಿಸುತ್ತದೆ ಎಂದು ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ಗೌರವಾಧ್ಯಕ್ಷ, ಉದ್ಯಮಿ ಕೆ.ಆರ್.ನಾಯ್ಕ ಹೇಳಿದರು.
ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ವತಿಯಿಂದ ಗುರುವಾರ ನಡೆದ ವಿಶೇಷಚೇತನ ಗೌರವ ಶಿಕ್ಷಕರಿಗೆ ಮತ್ತು ವಿಶೇಷ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಚಂದ್ರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಉದಯ ಕೊಠಾರಿ, ಶಿಕ್ಷಕ ಕಾರ್ತಿಕ್ ಹಂಗಾರಕಟ್ಟೆ, ಸರ್ಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಉಪನ್ಯಾಸಕ ಪ್ರಣೀತ್ ಕುಮಾರ್ ಕೆ.ಶೆಟ್ಟಿ, ಅಂಪಾರು ವಾಗ್‌ಜ್ಯೋತಿ ವಿಶೇಷ ಶಾಲೆ ಶಿಕ್ಷಕಿ ರಾಜೇಶ್ವರಿ, ಕುಂದಾಪುರ ಚೈತನ್ಯ ವಿಶೇಷ ಶಾಲೆ ಮುಖ್ಯಶಿಕ್ಷಕಿ ಲೀಲಾ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ಅಧ್ಯಕ್ಷ ಸಾಯಿನಾಥ್ ಶೇಟ್, ಗೀತಾ ನಾಯ್ಕ, ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು.
ಮರವಂತೆ ವಿಆರ್‌ಡಬ್ಲ್ಯು ನಾಗಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ನೋಡೆಲ್ ಅಧಿಕಾರಿ ಜಯಶ್ರೀ ಎಸ್.ಮೊಗವೀರ ಪ್ರಸ್ತಾವಿಸಿದರು.