ಜಿಲ್ಲೆ

ತುಳಸಿಗೌಡ, ನಟಕಟ್ಟಿನ್‌ಗೆ ಗೌರವ ಡಾಕ್ಟರೇಟ್

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ೩೬ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ ಮತ್ತು ಪರಿಸರಪ್ರೇಮಿ ಪದ್ಮಶ್ರೀ ತುಳಿಸಿಗೌಡ ಹಾಗೂ ಅಣ್ಣಿಗೇರಿಯ ಕೃಷಿ ಸಲಕರಣೆಗಳ ಸಂಶೋಧಕ ಪದ್ಮಶ್ರೀ ಅಬ್ದುಲ್‌ಖಾದರ ನಡಕಟ್ಟಿನ ಅವರು ಕೃಷಿ ವಿವಿಗೌರವ ಡಾಕ್ಟರೇಟ್'ಗೆ ಭಾಜನರಾದರು.
ತುಳಸಿಗೌಡ ಅವರು ಲಕ್ಷಗಟ್ಟಲೇ ಮರಗಳನ್ನು ಬೆಳೆಸಿ ವೃಕ್ಷಮÁತೆ ಎನಿಸಿಕೊಂಡಿದ್ದಾರೆ. ೩೦೦ಕ್ಕೂ ಹೆಚ್ಚು ಕಾಡು ಮರಗಳ ಮಾಹಿತಿ ಹೊಂದಿರುವ ಇವರು ಸಸ್ಯವಿಜ್ಞಾನಿ, ಅರಣ್ಯ ವಿಶ್ವಕೋಶ, ವೃಕ್ಷದೇವಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಇನ್ನೋರ್ವ ಸಾಧಕ ಅಣ್ಣಿಗೇರಿಯ ಕೃಷಿ ಸಲಕರಣೆಗಳ ಸಂಶೋಧಕ ಅಬ್ದುಲ್‌ಖಾದರ ನಡಕಟ್ಟಿನ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರೈತರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವ ಉದ್ದೇಶದಿಂದ ೪೦ಕ್ಕೂ ಹೆಚ್ಚು ಸಲಕರಣೆಗಳ ಆವಿಷ್ಕಾರವನ್ನು ಪರಿಗಣಿಸಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಐಸಿಎಆರ್ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್, ಕುಲಪತಿ ಡಾ. ಪಿ.ಎಲ್. ಪಾಟೀಲ ಇದ್ದರು.