ಜಿಲ್ಲೆ

ತುಳಸಿಗೌಡ, ನಟಕಟ್ಟಿನಗೆ ಗೌರವ ಡಾಕ್ಟರೇಟ್

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ೩೬ನೇ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ `ಗೌರವ ಡಾಕ್ಟರೇಟ್' ಪ್ರದಾನ ಮಾಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಉಳುವರೆಯ ಪದ್ಮಶ್ರೀ ತುಳಸಿಗೌಡ ಹಾಗೂ ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರದ ಪದ್ಮಶ್ರೀ ಅಬ್ದುಲ್‌ಖಾದರ ಇಮಾಮ್‌ಸಾಬ ನಡಕಟ್ಟಿನ ಅವರಿಗೆ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.

  • ಪದ್ಮಶ್ರೀ ತುಳಸಿಗೌಡ:
    ಇವರು ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ ಮತ್ತು ಪರಿಸರಪ್ರೇಮಿ. ವೃಕ್ಷಮÁತೆ ಎಂದೆನಿಸಿಕೊAಡಿರುವ ಇವರು ಲಕ್ಷಗಟ್ಟಲೇ ಮರಗಳನ್ನು ಬೆಳೆಸಿದ್ದಾರೆ. ಕಟ್ಟಿಗೆ ಸಂಗ್ರಹಿಸಿ ಮÁರಾಟ ಮÁಡಿ ಜೀವನ ಸಾಗಿಸುತ್ತಿದ್ದ ಅವರು ಅರಣ್ಯದಲ್ಲಿ ಸಸಿಗಳನ್ನು ಪೋಷಿಸುವ ಕಾರ್ಯ ಮಾಡುತ್ತಿದ್ದರು. ಇದನ್ನು ಗಮನಿಸಿ ಅರಣ್ಯಾಽಕಾರಿ ರೆಡ್ಡಿ ಎಂಬುವರು, ಮÁಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ೫೭ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮÁಡಿ ನಿವೃತ್ತರಾಗಿದ್ದಾರೆ. ಇಳಿವಯಸ್ಸಿನಲ್ಲೂ ಅರಣ್ಯ ನರ್ಸರಿಗೆ ಹೋಗಿ ಯುವಕರಿಗೆ ತರಬೇತಿ, ಮÁರ್ಗದರ್ಶನ ನೀಡುತ್ತಿದ್ದಾರೆ. ೩೦೦ಕ್ಕೂ ಹೆಚ್ಚು ಕಾಡು ಮರಗಳ ಮಾಹಿತಿ ಹೊಂದಿರುವ ಇವರು ಸಸ್ಯವಿಜ್ಞಾನಿ, ಅರಣ್ಯ ವಿಶ್ವಕೋಶ, ವೃಕ್ಷದೇವಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಪರಿಸರ ಕಾಳಜಿ ಮತ್ತು ಸೇವೆಯನ್ನು ಗಮನಿಸಿ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಅಬ್ದುಲ್‌ಖಾದರ ನಡಕಟ್ಟಿನ:
    ಇವರು ಅಣ್ಣಿಗೇರಿಯ ಕೃಷಿ ಸಲಕರಣೆಗಳ ಸಂಶೋಧಕ, ಸಮÁಜಸೇವಕ ಮತ್ತು ಪರಿಸರವಾದಿ. ಕೃಷಿ ಕುಟುಂಬದ ಇವರು ಓದಿದ್ದು ಪ್ರೌಢಶಿಕ್ಷಣ ಮಾತ್ರ. ಮುಂದೆ ಓದಲು ಬಯಸಿದರೂ ತಂದೆಯ ಸಲಹೆಯಂತೆ ಓದು ಮೊಟಕುಗೊಳಿಸಿ ಕೃಷಿ ಕಾಯಕದಲ್ಲಿ ತೊಡಗಿದರು. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದು ಮತ್ತು ಇತರ ರೈತರಿಗೂ ನೆರವಾಗುವುದು ಇವರ ಗುರಿಯಾಗಿತ್ತು. ಅದರಂತೆ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ನೆರವಾಗುವಂಥ ೪೦ಕ್ಕೂ ಹೆಚ್ಚು ಸಲಕರಣೆಗಳ ಆವಿಷ್ಕಾರ ಮಾಡಿದ್ದಾರೆ. ಟ್ರ‍್ಯಾಕ್ಟರ್ ಚಾಲಿತ ನಟಕಟ್ಟಿನ ಬಿತ್ತುವ ಕೂರಿಗೆ ಈ ಭಾಗದಲ್ಲಿ ಬಹುಬೇಡಿಕೆ ಪಡೆದಿದೆ. ಶೇಂಗಾ ಕಟಾವು ಮಾಡಿ ರಾಶಿ ಮಾಡುವ ಯಂತ್ರವನ್ನು ಆವಿಷ್ಕರಿಸುತ್ತಿದ್ದಾರೆ. ತಮ್ಮ ಹತ್ತಾರು ಸಂಶೋಧನೆೆಗಳಿಗೆ ಪೇಟೆಂಟ್ ಪಡೆದಿರುವುದು ಇವರ ಹೆಮ್ಮೆ. ಇವರ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.