ಅಂತರಸಂತೆ ಗ್ರಾಮದ ಸಾರನಾಥ ಬುದ್ಧ ವಿಹಾರದ ಬಿಕ್ಕುಣಿ ಗೌತಮಿ ಬಂತೇಜಿ ಅವರಿಗೆ ಯೂನಿವರ್ಸಿಟಿ ಆಫ್ ತೊಳಸ ಮೆಕ್ಸಿಕೋ ಆ್ಯಂಡ್ ಇಂಟರ್ ನ್ಯಾಷನಲ್ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. 
ಜಿಲ್ಲೆ

ಬಿಕ್ಕುಣಿ ಗೌತಮಿ ಬಂತೇಜಿಗೆ ಗೌರವ ಡಾಕ್ಟರೇಟ್

ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಗ್ರಾಮದಲ್ಲಿರುವ ಸಾರನಾಥ ಬುದ್ಧ ವಿಹಾರದ ಬಿಕ್ಕುಣಿ ಗೌತಮಿ ಬಂತೇಜಿ ಅವರ ಸಾಮಾಜಿಕ ಸೇವೆ ಗುರುತಿಸಿ ಕಲಬುರಗಿಯ ಯೂನಿವರ್ಸಿಟಿ ಆಫ್ ತೊಳಸ ಮೆಕ್ಸಿಕೋ ಆ್ಯಂಡ್ ಇಂಟರ್‌ನ್ಯಾಷನಲ್ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿದೆ.

ಹತ್ತು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, 70ರ ವಯಸ್ಸಿನಲ್ಲಿಯೂ ಸಂಚರಿಸಿ ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ವಿಚಾರಸಂಕಿರಣಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಿಕ್ಕುಣಿ ಗೌತಮಿ ಬಂತೇಜಿ ಬುದ್ಧ ವಿಹಾರದಲ್ಲಿ ನಿತ್ಯ ಬುದ್ಧನ ಪ್ರವಚನ ನೀಡುತ್ತಿದ್ದು, ಯುವಕರಿಗೆ ಬುದ್ಧನ ಆದರ್ಶಗಳನ್ನು ಬೋಧಿಸುತ್ತಿದ್ದಾರೆ.