ಜಿಲ್ಲೆ

ಸಿಡಿಎ ಅಧ್ಯಕ್ಷ ಸ್ಥಾನ ಪಕ್ಷ ಕೊಟ್ಟಿರುವ ಜವಾಬ್ದಾರಿ

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಅದು ಪಕ್ಷ ನೀಡಿರುವ ಜವಾಬ್ದಾರಿ. ನಗರಕ್ಕೆ ಗೌರವ ತರುವಂತೆ ಅಭಿವೃದ್ಧಿ ಕೆಲಸ ಮಾಡಿದಾಗ ಮಾತ್ರ ಹುದ್ದೆಗೆ ಸಾರ್ಥಕತೆ ಲಭಿಸುತ್ತದೆ ಎಂದು ಸಿಡಿಎ ಮಾಜಿ ಅಧ್ಯಕ್ಷ ಬಿ.ರಾಜಪ್ಪ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಿಡಿಎ ನಾಮನಿರ್ದೇಶಿತ ಅಧ್ಯಕ್ಷ, ಸದಸ್ಯರನ್ನು ಸನ್ಮಾನಿಸಿ ಮಾತನಾಡಿ, ನಾನು ಸೇರಿದಂತೆ ಹಲವರು ಸಿಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇವೆ. ಅದು ವೈಯಕ್ತಿಕ ಹೆಸರಿಗೆ ಸಿಕ್ಕಂತ ಹುದ್ದೆಯಲ್ಲ. ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಜವಾಬ್ದಾರಿ. ಅದನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ. ಹಾಗಾಗಿ ಸಚಿವರು ಹಾಗೂ ಮುಖಂಡರ ಸಲಹೆ, ಸಹಕಾರ ಪಡೆದು ದಿನಾಂಕ ನಿಗದಿಸಿಪಡಿಸಿ ಅಧಿಕಾರ ಸ್ವೀಕಾರ ಸಮಾರಂಭ ಆಯೋಜಿಸಲಾಗುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಎಸ್.ರಂಗನಾಥ್ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿದ ಅಧ್ಯಕ್ಷ ಸಿ.ಆನಂದ್, ಸದಸ್ಯರಾದ ಸಮೃದ್ಧ ಪೈ, ಮಂಜುನಾಥ್, ಸೂರ್ಯ ಗೋವಿಂದ್, ರಾಜ್​ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್​ಅರಸ್, ಎಪಿಎಂಸಿ ಅಧ್ಯಕ್ಷ ಶಿವೇಗೌಡ, ಶ್ರೀಕಾಂತ್ ಪೈ, ಕವಿತಾ ಶೇಖರ್, ಶ್ರೀನಿವಾಸ್, ಸೀತಾರಾಂ ಭರಣ್ಯ, ಬಸವರಾಜು ಇತರರಿದ್ದರು.</