ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ‘ಎ’ ಗ್ರೇಡ್ ಪಡೆದ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು.
ಪೆರ್ಲ ನಾಲಂದ ಕಾಲೇಜು ಪ್ರಾಂಶುಪಾಲ ಶಂಕರ್ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಡಳಿತ ಮಂಡಳಿಯ ವೆಂಕಟರಾಜ ಮಿತ್ರ, ಸದಾಶಿವ ಭಟ್ ಹರಿನಿಲಯ, ಮುಖ್ಯಶಿಕ್ಷಕ ಕೇಶವ ಪ್ರಕಾಶ್, ಶಾಲಾ ಶಿಕ್ಷಕ ವೃಂದದವರು, ರಕ್ಷಕರು ಪಾಲ್ಗೊಂಡಿದ್ದರು.