ಜಿಲ್ಲೆ

ಸಾಧಕರಿಗೆ ಸನ್ಮಾನ

ಚಿತ್ರದುರ್ಗ: ಗಾನಯೋಗಿ ಸಂಗೀತ ಬಳಗದಿಂದ ನಗರದ ಶ್ರೀಶೈಲಾ ಎಂಟರ್ ಪ್ರೈಸಸ್ ಆವರಣದಲ್ಲಿ ಗುರುವಾರ ಲಿಂ.ಗುರು ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ 13ನೇ ಪುಣ್ಯಸ್ಮರಣೆಯಲ್ಲಿ ಸಂಗೀತ ಶಿಕ್ಷಕಿ ಕೋಕಿಲಾ ರುದ್ರಮೂರ್ತಿ, ಸಮಾಜ ಸೇವಕಿ ಚಳ್ಳಕೆರೆಯ ಗೀತಾ ನಾಗರಾಜ್, ಪಂಚಮಸಾಲಿ ಸಮಾಜ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಮಾ ರಮೇಶ್, ಜಮುರಾ ಸಂಗಿತ ಕಲಾವಿದೆ ಉಮೇಶ್ ಪತ್ತಾರ್, ವಿದೂಷಿ ಹರ್ಷಿತಾ ನಿತಿನ್ ಅವರನ್ನು ಸನ್ಮಾನಿಸಲಾಯಿತು.

ಬಳಗದ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ, ಅಧ್ಯಕ್ಷ ಎಂ.ತೋಟಪ್ಪ, ಶೋಭಾ ಮಲ್ಲಿಕಾರ್ಜುನ, ಕೆ.ಟಿ.ಶಾಂತಮ್ಮ, ಗೀತಾ ನಾಗರಾಜ್, ಜಿ.ಟಿ.ನಂದೀಶ್, ಎಂ.ಹೇಮಲತಾ, ಪೂರ್ಣಿಮಾ, ಬಸವರಾಜ್ ಕಟ್ಟಿ, ಮಲ್ಲಿಕಾರ್ಜುನ್, ಡಾ.ನವೀನ್ ಸಜ್ಜನ್, ಸುಮಾ ರಾಜಶೇಖರ್, ಸತ್ಯನಾರಾಯಣ್‌ರೆಡ್ಡಿ, ಹೇಮಲತಾ, ಮಮತಾ, ಗೀತಾಸಿಂಗ್ ಇದ್ದರು.