ಮೂಲ್ಕಿ: ನಿವೃತ್ತ ಶಿಕ್ಷಕರ ವಿಶ್ರಾಂತ ಜೀವನದ ಸಮಯದಲ್ಲಿ ಶಿಷ್ಯ ವರ್ಗ ಮತ್ತು ಸಮಾಜ ಗುರುತಿಸುವ ಮೂಲಕ ವೃದ್ಧಾಪ್ಯ ಜೀವನದಲ್ಲಿ ನೆಮ್ಮದಿ ಸಂತೋಷ ನೀಡುವ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ಕಾರ್ನಾಡು ಶಾಲೆ ನಿವೃತ್ತ ಮುಖ್ಯಶಿಕ್ಷಕ ಸ್ಯಾಮ್ಸನ್ ಗ್ಯಾಬ್ರಿಯೆಲ್ ಜತ್ತನ್ನ ಹೇಳಿದರು.
ಲಯನ್ಸ್ ಕ್ಲಬ್ ಮೂಲ್ಕಿ ಆಶ್ರಯದಲ್ಲಿ ಹಿರಿಯ ಶಿಕ್ಷಕರಾದ ಮೂಲ್ಕಿ ಕಾರ್ನಾಡು ನಿವಾಸಿ ಸ್ಯಾಮ್ಸನ್ ಗ್ಯಾಬ್ರಿಯೆಲ್ ಜತ್ತನ್ನ ಹಾಗೂ ಅವರ ಪತ್ನಿ ಶಿಕ್ಷಕಿ ಶಾವಂತಿ ಜತ್ತನ್ನ ದಂಪತಿಯನ್ನು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಸಂದರ್ಭ ಮಾತನಾಡಿದರು.
ಹರ್ಷರಾಜ್ ಶೆಟ್ಟಿ ಜಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಪುತ್ರಿ ಡಾ.ಶಶಿಕಲಾ ಜಾಯ್ಸ, ಮೋಹನದಾಸ್ ಶೆಟ್ಟಿ, ಭಾಸ್ಕರ್ ಹೆಗ್ಡೆ, ಉದಯ ಅಮೀನ್, ಸದಾಶಿವ ಹೊಸದುರ್ಗ, ಪ್ರಶಾಂತ್ ಶೆಟ್ಟಿ, ಅರುಣಾ ಎಂ.ಶೆಟ್ಟಿ , ಪ್ರವೀಣ್ ಕಾರ್ನಾಡ್, ತುಕರಾಂ ಕಾರ್ನಾಡು ಉಪಸ್ಥಿತರಿದ್ದರು.