ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಅಂಕಿತಾ ಕೊಣ್ಣೂರ ಅವರನ್ನು ಕರ್ನಾಟಕ ರಾಜ್ಯ ಸಿರಿಗನ್ನಡ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆ ಮುಖ್ಯಸ್ಥ ವೆಂಕಟೇಶ ಲಕ್ಷಾಣಿ, ವೆಂಕಟೇಶ ಗುಡೆಪ್ಪನವರ, ಡಿ.ವಿ. ಹಿರೇಮಠ, ಡಿ.ಕೆ. ಟಕ್ಕಳಕಿ ಇತರರು ಇದ್ದರು. 
ಜಿಲ್ಲೆ

ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ

ಮುಧೋಳ: ನನ್ನ ಸಾಧನೆಯನ್ನು ರಾಜ್ಯದ ಜನತೆ ಪ್ರೋತ್ಸಾಹಿಸುತ್ತಿರುವುದನ್ನು ನೋಡಿದರೆ ನನ್ನ ಜವಾಬ್ದಾರಿ ಹೆಚ್ಚಿದಂತೆ ಭಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜದ ಋಣವನ್ನು ತೀರಿಸುತ್ತೇನೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರಋಣಿಯಾಗಿರುವೆ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಹೇಳಿದರು.

ಗುರುವಾರ ತಾಲೂಕಿನ ವಜ್ರಮಟ್ಟಿ ಗ್ರಾಮದಲ್ಲಿರುವ ಅವರ ಮನೆಯಲ್ಲಿ ರಾಜ್ಯಮಟ್ಟದ ಕನ್ನಡ ಭಾಷಾ ಸಂಪನ್ಮೂಲ ಶಿಕ್ಷಕರ ಸಿರಿಗನ್ನಡ ವೇದಿಕೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನನ್ನ ಸಾಧನೆಗೆ ಪ್ರೇರೇಪಣಾ ಶಕ್ತಿಯಾಗಿದ್ದ ನನ್ನ ಪಾಲಕರು, ಶಿಕ್ಷಕರು ಈ ಸನ್ಮಾನಕ್ಕೆ ಅರ್ಹರು ಎಂದು ಹೇಳಿದರು.

ಸಿರಿಗನ್ನಡ ವೇದಿಕೆ ಮುಖ್ಯಸ್ಥ ವೆಂಕಟೇಶ ಲಕ್ಷಾಣಿ. ಈರಪ್ಪ ಮಹಾಲಿಂಗಪುರ ಮಾತನಾಡಿ, ಕಳೆದ 21 ವರ್ಷಗಳಿಂದ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವೇದಿಕೆಯಿಂದ ಸನ್ಮಾನಿಸುತ್ತಾ ಬಂದಿದ್ದು, ಅಂಕಿತಾ ಕೊಣ್ಣೂರ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ನಿನಗೆ ಉಜ್ವಲ ಭವಿಷ್ಯವಿದೆ ಎಂದು ಶುಭ ಹಾರೈಸಿದರು.

ಸೋಮು ಮೆಟಗುಡ್ಡ, ಪಿ.ಎಂ. ಹುಗ್ಗಿನವರ, ಎಂ.ಡಿ. ಪಡಂದಾರ, ಮುಖ್ಯ ಶಿಕ್ಷಕ ವೆಂಕಟೇಶ ಗುಡೆಪ್ಪನವರ, ಡಿ.ವಿ. ಹಿರೇಮಠ, ಡಿ.ಕೆ. ಟಕ್ಕಳಕಿ, ಎಸ್.ಎಫ್. ಹಾದಿಮನಿ, ಉಮೇಶ ವಡವಾಣಿ, ಎಂ.ಆರ್. ಕಳ್ಳಿ, ಮಹಾದೇವ ಅಂಗಡಗೇರಿ ಇತರರಿದ್ದರು.